ಪ್ರತಿ 4 ಎಚ್-1ಬಿ ವೀಸಾದಾರರ ಪೈಕಿ ಒಬ್ಬ ಭಾರತೀಯ

Update: 2018-10-20 16:10 GMT

ವಾಶಿಂಗ್ಟನ್, ಅ. 20: ಈ ವರ್ಷದ ಅಕ್ಟೋಬರ್ 5ರ ವೇಳೆಗೆ, ಪ್ರತಿ 4 ಎಚ್-1ಬಿ ವೀಸಾದಾರರ ಪೈಕಿ ಸುಮಾರು ಮೂವರು ಭಾರತೀಯರು ಎಂದು ಅಮೆರಿಕದ ವರದಿಯೊಂದು ತಿಳಿಸಿದೆ.

ಅಕ್ಟೋಬರ್ 5ರ ವೇಳೆಗೆ, ಎಚ್-1ಬಿ ವೀಸಾದಲ್ಲಿ ಅಮೆರಿಕದಲ್ಲಿ 4,19,637 ವಿದೇಶಿಯರು ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ತಿಳಿಸಿದೆ.

ಈ ಪೈಕಿ, 3,09,986 ಮಂದಿ ಭಾರತೀಯರು ಎಂದು ಅದು ‘ಎಚ್-1ಬಿ ಪಿಟಿಶನ್ಸ್ ಬೈ ಜಂಡರ್ ಆ್ಯಂಡ್ ಕಂಟ್ರಿ ಬರ್ತ್ ಫಿಸ್ಕಲ್ ಯೀಯರ್ 2018’ ಎಂಬ ವರದಿಯಲ್ಲಿ ಹೇಳಿದೆ.

ಪ್ರತಿ ನಾಲ್ಕು ಎಚ್-1ಬಿ ವೀಸಾಗಳ ಪೈಕಿ ಕೇವಲ ಒಬ್ಬರು ಮಹಿಳೆ. ಅಂದರೆ, 1,06096 ಮಂದಿ ಮಹಿಳೆಯರು ಮತ್ತು 3,11,997 ಮಂದಿ ಪುರುಷರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News