ಸೌದಿ ವಿವರಣೆ ವಿಶ್ವಾಸಾರ್ಹ: ಟ್ರಂಪ್

Update: 2018-10-20 16:16 GMT

ವಾಶಿಂಗ್ಟನ್, ಅ. 20: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಸಾವಿನ ಬಗ್ಗೆ ಸೌದಿ ಅರೇಬಿಯ ನೀಡಿರುವ ವಿವರಣೆ ವಿಶ್ವಾಸಾರ್ಹವಾಗಿದೆ ಹಾಗೂ ‘ಮೊದಲ ಮಹತ್ವದ ಹೆಜ್ಜೆ’ಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ಖಶೋಗಿಯ ಸಾವು ಖಚಿತವಾಗಿರುವುದನ್ನು ಕೇಳಿ ನಮಗೆ ಬೇಸರವಾಗಿದೆ ಹಾಗೂ ಅವರ ಕುಟುಂಬ, ಅವರನ್ನು ಮದುವೆಯಾಗಬೇಕಿದ್ದ ಮಹಿಳೆ ಹಾಗೂ ಸ್ನೇಹಿತರಿಗೆ ನಾವು ಗಾಢ ಸಂತಾಪವನ್ನು ವ್ಯಕ್ತಪಡಿಸುತ್ತೇವೆ’’ ಎಂದು ಪತ್ರಕರ್ತನ ಸಾವನ್ನು ಸೌದಿ ಅರೇಬಿಯ ಘೋಷಿಸಿದ ಬಳಿಕ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿದರು.

ಸೌದಿ ಅರೇಬಿಯದ ವಿವರಣೆ ವಿಶ್ವಾಸಾರ್ಹವೆಂದು ನಿಮಗೆ ಅನಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘‘ಹೌದು, ಹೌದು’’ ಎಂದುತ್ತರಿಸಿದರು.

‘‘ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ನಮ್ಮ ಪರಿಶೀಲನೆ ಅಥವಾ ತನಿಖೆಯನ್ನು ನಾವು ಇನ್ನೂ ಮುಗಿಸಿಲ್ಲ. ಆದರೆ, ಇದು ಅತ್ಯಂತ ಮಹತ್ವದ ಮೊದಲ ಹೆಜ್ಜೆ ಎಂದು ನನಗನಿಸುತ್ತದೆ’’ ಎಂದು ಬಳಿಕ ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News