“ಅವರು ಬದುಕಿರುವ ಬಗ್ಗೆ ಖಾತರಿಯಿಲ್ಲ”

Update: 2018-10-20 16:33 GMT

ಬೀಜಿಂಗ್, ಅ. 20: ಚೀನಾದಲ್ಲಿ ಬಂಧನದಲ್ಲಿರುವ ಅಂತರ್‌ರಾಷ್ಟ್ರೀಯ ಪೊಲೀಸ್ ಸಂಘಟನೆ ‘ಇಂಟರ್‌ಪೋಲ್’ನ ಮಾಜಿ ಅಧ್ಯಕ್ಷ ಮೆಂಗ್ ಹೊಂಗ್‌ವೇ ಮತ್ತು ನನ್ನ ಜೀವಕ್ಕೆ ಅಪಾಯವಿದೆ ಎಂಬ ಭೀತಿಯನ್ನು ಅವರ ಪತ್ನಿ ಗ್ರೇಸ್ ಮೆಂಗ್ ವ್ಯಕ್ತಪಡಿಸಿದ್ದಾರೆ.

ಬಿಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ, ತನ್ನ ಗಂಡನನ್ನು ನಿಗೂಢ ಸನ್ನಿವೇಶದಲ್ಲಿ ಬಂಧಿಸಿರುವ ‘ಕ್ರೂರ’ ಹಾಗೂ ‘ಕೊಳಕು’ ಚೀನಾ ಸರಕಾರದ ವಿರುದ್ಧ ಅವರು ಹರಿಹಾಯ್ದರು.

‘‘ಅದು ರಾಜಕೀಯ ಹಿಂಸೆ ಎಂದು ನನಗನಿಸುತ್ತಿದೆ. ಅವರು ಬದುಕಿದ್ದಾರೆ ಎನ್ನುವ ಬಗ್ಗೆ ನನಗೆ ಖಾತರಿಯಿಲ್ಲ’’ ಎಂದು ಫ್ರಾನ್ಸ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News