ಕೊಪ್ಪ ತಾಲ್ಲೂಕು ಮುಸ್ಲಿಂ ಸೌಹಾರ್ದ ಒಕ್ಕೂಟ ಅಸ್ತಿತ್ವಕ್ಕೆ

Update: 2018-10-21 06:26 GMT
ಕಮಾಲಿಯಾ

ಕೊಪ್ಪ, ಅ. 21: ಸಾಮಾಜಿಕ, ಆರ್ಥಿಕ, ದಾರ್ಮಿಕ, ಶೈಕ್ಷಣಿಕ ವಾಗಿ ಸಮುದಾಯದ ಸೇವೆ, ನೆರವು, ಮಾರ್ಗದರ್ಶನದ ಉದ್ದೇಶ ದೊಂದಿಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಪ್ಪ ತಾಲ್ಲೂಕು ಮುಸ್ಲಿಂ ಸೌಹಾರ್ದ ಒಕ್ಕೂಟ ಇದರ ನೂತನ ಅಧ್ಯಕ್ಷರಾಗಿ ಕೊಪ್ಪದ ಕಮಾಲಿಯಾ ಇವರು ಅವಿರೋಧವಾಗಿ ಆಯ್ಕೆಯಾದರು. 

ಉಪಾಧ್ಯಕ್ಷರಾಗಿ ಎಸ್.ಎಚ್. ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಹಫೀಝ್, ಸಹ ಕಾರ್ಯದರ್ಶಿಯಾಗಿ ಝುಬೈರ್ ಅಹ್ಮದ್, ಖಜಾಂಚಿಯಾಗಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ಆಯ್ಕೆಯಾದರು ಹಾಗು ಎಂಟು ಮಂದಿ ಕಾರ್ಯಕಾರಿ ಸಮಿತಿಯನ್ನು ರಚಿಸಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಲಾಯಿತು.

ಸಮುದಾಯದ ಜನರ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪ್ರಯತ್ನಿಸುವುದು, ಸಮಾಜದಲ್ಲಿ ಶಾಂತಿ, ಪ್ರೀತಿ, ಸಾಮರಸ್ಯ, ಸೌಹಾರ್ದತೆಗೆ ಆದ್ಯತೆ ನೀಡುವುದು. ಪ್ರಜಾಸತ್ತಾತ್ಮಕವಾದ ಕಾರ್ಯಕ್ರಮ ಗಳ ಮೂಲಕ ಸಮುದಾಯದ ನಿಸ್ವಾರ್ಥ ಸೇವೆಗೆ ಒಕ್ಕೂಟ ತನನ್ನು ತಾನು ತೊಡಗಿಸಿಕೊಳ್ಳಲಿದೆ, ವಾರ್ಷಿಕ ಸದಸ್ಯತ್ವದೊಂದಿಗೆ ಸಮಾನ ಮನಸ್ಕರೆಲ್ಲರೂ ಒಕ್ಕೂಟದ ಸದಸ್ಯರಾಗಿ ಸಹಕರಿಸಬೇಕೆಂದು ನೂತನ ಅಧ್ಯಕ್ಷ ಕಮಾಲಿಯಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News