ಮೊದಲ ಏಕದಿನ : ವಿಂಡೀಸ್ ನ ಆರಂಭಿಕ ದಾಂಡಿಗ ಹೇಮ್ ರಾಜ್ ಬೇಗನೆ ಔಟು

Update: 2018-10-21 09:15 GMT

ಗುವಾಹತಿ, ಅ.21: ಟೀಮ್ ಇಂಡಿಯಾ ವಿರುದ್ಧ ಮೊದಲ ಏಕದಿನ  ಪಂದ್ಯದಲ್ಲಿ  ವೆಸ್ಟ್ ಇಂಡೀಸ್ ನ ಮೊದಲ ವಿಕೆಟ್ ಬೇಗನೆ ಉರುಳಿದೆ.

ವೇಗಿ ಮುಹಮ್ಮದ್ ಶಮಿ ದಾಳಿಯನ್ನು ಎದುರಿಸಲಾರದೆಚೊಚ್ಚಲ  ಏಕದಿನ ಪಂದ್ಯವನ್ನಾಡುತ್ತಿರುವ  ವಿಂಡೀಸ್ ನ  ಚಂದ್ರಪಾಲ್ ಹೇಮ್ ರಾಜ್  (9) ಔಟಾಗಿ ಪೆವಿಲಿಯನ್ ಸೇರಿದ್ದಾರೆ.  10 ಓವರ್ ಗಳ ಮುಕ್ತಾಯಕ್ಕೆ ವಿಂಡೀಸ್ 1 ವಿಕೆಟ್ ನಷ್ಟದಲ್ಲಿ 59 ರನ್ ಗಳಿಸಿದೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿದ್ದರು.



 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News