ಲೈಂಗಿಕ ಕಿರುಕುಳ: ಸರಿತಾ ಕೆ. ನಾಯರ್ ರ ಹೇಳಿಕೆಯನ್ನು ಪುನಃ ಪಡೆಯಲಿರುವ ಪೊಲೀಸರು

Update: 2018-10-21 11:32 GMT

 ತಿರುವನಂತಪುರಂ,ಅ.21: ಲೈಂಗಿಕ ಕಿರುಕುಳ ಪ್ರಕರಣ ದೂರಿನಲ್ಲಿ ಸರಿತಾ ಕೆ. ನಾಯರ್ ರ ಹೇಳಿಕೆಯನ್ನು ಪುನಃ  ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಆನಂತರ ಉಮ್ಮನ್ ಚಾಂಡಿ, ಕೆ.ಸಿ ವೇಣುಗೋಪಾಲ್‍ರ ಹೇಳಿಕೆಯನ್ನು ಪಡೆಯಲಾಗುವುದು. 2012ರಲ್ಲಿ ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾಗಿದ್ದಾಗ ಗೆಸ್ಟ್ ಹೌಸ್‍ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸರಿತಾ ನಾಯರ್ ದೂರು ನೀಡಿದ್ದರು. ಕೇಂದ್ರ ಸಚಿವರಾಗಿದ್ದಾಗ ಕೆ.ಸಿ. ವೇಣುಗೋಪಾಲ್ ಕೂಡ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪ್ರಕರಣದ ತನಿಖೆಗೆ ವಿಶೇಷ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಎಸ್‍ಪಿ ಅಬ್ದುಲ್ ಕರೀಂ ನೇತೃತ್ವದ ಪೊಲೀಸರ ತಂಡ ಪ್ರಕರಣದಲ್ಲಿ ತನಿಖೆ ನಡೆಸಲಿದೆ.

 ಸೋಲಾರ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದ  ಕೆ.ಸಿ. ವೇಣುಗೋಪಾಲ್ ವಿರುದ್ಧ ಕಿರುಕುಳ, ಅತ್ಯಾಚಾರ ಪ್ರಕರಣ ದಾಖಲಿಸಿ ಕ್ರೈಂಬ್ರಾಂಚ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಸರಿತಾ ಕೆ. ನಾಯರ್ ದಕ್ಷಿಣ ವಲಯ ಎಡಿಜಿಪಿ ಎಸ್ ಅನಿಲ್ ಕುಮಾರ್‍ರಿಗೆ ಆರು ದೂರುಗಳನ್ನು ನೀಡಿದ್ದು, ಇದರಲ್ಲಿ ಎರಡು ದೂರುಗಳ ಆಧಾರದಲ್ಲಿ ಕ್ರಮ ಜರಗಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News