ಹೆಟ್ಮಾಯೆರ್ ಶತಕ ; ವಿಂಡೀಸ್ 322/8

Update: 2018-10-21 12:21 GMT
ಹೆಟ್ಮಾಯರ್ 106 ರನ್(78ಎ, 6ಬೌ,6ಸಿ) 

ಗುವಾಹತಿ, ಅ.21: ಮಧ್ಯಮ ಸರದಿಯ ದಾಂಡಿಗ ಶಿಮ್ರಾನ್ ಹೆಟ್ಮಾಯೆರ್ ದಾಖಲಿಸಿದ ಆಕರ್ಷಕ ಶತಕದ ನೆರವಿನಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತಕ್ಕೆ ಕಠಿಣ ಸವಾಲು ವಿಧಿಸಿದೆ.

ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 322 ರನ್ ಗಳಿಸಿದೆ.

ಹೆಟ್ಮಾಯರ್ 106 ರನ್(78ಎ, 6ಬೌ,6ಸಿ) ಗಳಿಸಿ ತಂಡಕ್ಕೆ ಉತ್ತಮ ಮೊತ್ತ ದಾಖಲಿಸಲು ನೆರವಾದರು.

ಹೆಟ್ಮಾಯೆರ್ ತನ್ನ 13ನೇ ಏಕದಿನ ಪಂದ್ಯದಲ್ಲಿ 74 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಲ್ಲಿ ಮೂರನೇ ಏಕದಿನ ಶತಕ ದಾಖಲಿಸಿದರು.

    ಆರಂಭಿಕ ದಾಂಡಿಗ ಕೀರನ್ ಪೊವೆಲ್ ಅರ್ಧಶತಕ (51), ವಿಕೆಟ್ ಕೀಪರ್‌ಶಾಯಿ ಹೋಪ್(32), ರೊವ್‌ಮನ್ ಪೊವೆಲ್(22), ನಾಯಕ ಜಾಸನ್ ಹೋಲ್ಡರ್(38) ಎರಡಂಕೆಯ ಸ್ಕೋರ್ ಸೇರಿಸಿದರು. ಮೊದಲ ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಆಡಿದ ಚಂದ್ರಪಾಲ್ ಹೇಮ್‌ರಾಜ್ 9 ರನ್, ಆಶ್ಲೆ ನರ್ಸ್ 2ರನ್, ಕೊನೆಯಲ್ಲಿ ದೇವೇಂದ್ರ ಬಿಶೊ ಔಟಾಗದೆ 22 ರನ್ ಮತ್ತು ಕೇಮರ್ ರೋಚ್ ಔಟಾಗದೆ 26 ರನ್ ಗಳಿಸಿ ತಂಡದ ಸ್ಕೋರ್‌ನ್ನು 300ರ ಗಡಿ ದಾಟಿಸಿದರು.

 ಭಾರತದ ಪರ ಯಜುವೇಂದ್ರ ಚಹಾಲ್ 41ಕ್ಕೆ 3, ಮುಹಮ್ಮದ್ ಶಮಿ 81ಕ್ಕೆ 2 , ರವೀಂದ್ರ ಜಡೇಜ 66ಕ್ಕೆ 2 ಮತ್ತು ಖಲೀಲ್ ಅಹ್ಮದ್ 64ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News