ಶೀಘ್ರವೇ ವ್ಯಾಟ್ಸ್ ಆ್ಯಪ್‌ನಲ್ಲಿ ಎರಡು ಹೊಸ ಸೌಲಭ್ಯ

Update: 2018-10-21 15:45 GMT

 ಹೊಸದಿಲ್ಲಿ, ಅ.21: ಈಗ ವ್ಯಾಟ್ಸ್ ಆ್ಯಪ್ ನೂತನ ಎರಡು ಸೌಲಭ್ಯ ಒದಗಿಸುವ ದಿಸೆಯಲ್ಲಿ ಕಾರ್ಯ ನಿರತವಾಗಿದೆ. ವ್ಯಾಟ್ಸ್ ಆ್ಯಪ್ ಶೀಘ್ರದಲ್ಲಿ ಪಿಕ್ಚರ್-ಇನ್-ಪಿಕ್ಚರ್ (ಪಿಐಪಿ) ಮೋಡ್ ಹಾಗೂ ಸ್ಟಿಕ್ಕರ್‌ಗಳನ್ನು ಪರಿಚಯಿಸಲಿದೆ ಎಂದು ಈ ಹಿಂದೆ ಹೇಳಿಕೆ ತಿಳಿಸಿತ್ತು. ಈಗ ಚಾಟ್‌ಗಾಗಿ ವೆಕೇಶನ್ ಮೋಡ್ ಹಾಗೂ ಸೈಲೆಂಟ್ ಮೋಡ್‌ನ ನೂತನ ಸೌಲಭ್ಯ ರೂಪಿಸುವಲ್ಲಿ ಫೇಸ್‌ಬುಕ್ ಮಾಲಕತ್ವದ ವ್ಯಾಟ್ಸ್‌ಆ್ಯಪ್ ಕಾರ್ಯ ನಿರತವಾಗಿದೆ ಎಂದು ವರದಿ ಹೇಳಿದೆ.

ವ್ಯಾಟ್ಸ್ ಆ್ಯಪ್ ವೆಕೇಶನ್ ಮೋಡ್ ಸೌಲಭ್ಯ ನೀಡುವ ಬಗ್ಗೆ ಕಾರ್ಯ ನಿರತವಾಗಿದೆ. ಇದು ಸಂಗ್ರಹಿತ ಚಾಟ್ ಅನುಭವನ್ನು ಸುಧಾರಿಸಲು ನೆರವಾಗಲಿದೆ ಎಂದು ವಾಬೆಟೈನ್‌ಫೋ ವರದಿ ತಿಳಿಸಿದೆ. ಈಗಿರುವ ಸೌಲಭ್ಯದಲ್ಲಿ ಹೊಸ ಸಂದೇಶ ಬಂದಾಗ ಸಂಗ್ರವಾಗಿದ್ದ ಹಳೆ ಸಂದೇಶಗಳು ಯಾಂತ್ರೀಕೃತವಾಗಿ ಅಳಿಯುತ್ತದೆ. ಆದರೆ, ನೂತನ ವೆಕೇಶನ್ ಮೋಡ್ ಸೌಲಭ್ಯದಲ್ಲಿ ನಿಮ್ಮ ವ್ಯಾಟ್ಸ್ ಆ್ಯಪ್ ವಿಂಡೋದಲ್ಲಿ ಹಳೆಯ ಸಂದೇಶಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ, ಹೊಸ ಸಂದೇಶಗಳು ಬಂದರೂ ಈ ಹಳೆಯ ಸಂದೇಶಗಳು ಹಾಗೇ ಇರುತ್ತವೆ. ಅಂದರೆ ಹೊಸ ಸಂದೇಶ ಓದಬೇಕಾದರೆ ಸಂಗ್ರಹಿತ ಚಾಟ್‌ಗಳಿಂದ ಚಾಟ್ ಮ್ಯಾನುವೆಲ್ ಅನ್ನು ತೆರೆಯಬೇಕಾಗುತ್ತದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News