ಅ.25ರಂದು ಬಿ.ಸಿ.ರೋಡ್‌ನಲ್ಲಿ ನ್ಯೂ ಬಿ ತರಬೇತಿ ಕಾರ್ಯಾಗಾರ

Update: 2018-10-22 11:18 GMT

ಬಂಟ್ವಾಳ, ಅ.22: ಗೇರುಕಟ್ಟೆಯ ಮನ್ಶರ್ ಗ್ರೂಪ್‌ನ ಮನ್ಶರ್ ಲರ್ನಿಂಗ್ ನೆಟ್‌ವರ್ಕ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ‘ನ್ಯೂ ಬಿ ಪ್ರೀ ಸ್ಕೂಲ್’ ವಿಭಾಗಕ್ಕೆ ಹೊಸದಾಗಿ ತರಬೇತಿಗಾಗಿ ಆಯ್ಕೆಯಾದ ಶಿಕ್ಷಕಿಯರಿಗೆ ಅ.25ರಂದು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಅಂದು ಅಪರಾಹ್ನ 2:30ಕ್ಕೆ ಬಿ.ಸಿ.ರೋಡ್‌ನ ಲಯನ್ಸ್ ಭವನದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಮನ್ಶರ್ ಗ್ರೂಪ್ ಅಧ್ಯಕ್ಷ ಸೈಯದ್ ಉಮರ್ ಅಸ್ಸಖಾಫ್ ಹಾಗೂ ನ್ಯೂ ಬಿ ತಂಡದ ಪ್ರಮುಖರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News