ಅಮೆಮಾರ್: ಎಸ್ಕೆಎಸ್ಸೆಸ್ಸೆಫ್ 'ಟ್ರೆಂಡ್' ಜಿಲ್ಲಾ ತರಬೇತಿ ಶಿಬಿರ

Update: 2018-10-23 04:24 GMT

ಮಂಗಳೂರು, ಅ.23:  ಎಸ್ಕೆಎಸ್ಸೆಸ್ಸೆಫ್ನ ವಿದ್ಶಾಭ್ಶಾಸ ವಿಭಾಗವಾದ 'ಟ್ರೆಂಡ್' ಇದರ ಜಿಲ್ಲಾ ತರಬೇತಿ ಶಿಬಿರವು ಎಸ್ಕೆಎಸ್ಸೆಸ್ಸೆಫ್ ಅಮೆಮಾರ್ ಶಾಖಾ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

ಟ್ರೆಂಡ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ಹಮೀದ್ ಕಣ್ಣೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ ಉದ್ಘಾಟಿಸಿದರು. ಜಿಲ್ಲಾ ಜನರಲ್ ಕನ್ವೀನರ್ ಇಕ್ಬಾಲ್ ಬಾಳಿಲ ಪ್ರಾಸ್ತಾವಿಕ ಭಾಷಣ ಮಾಡಿದರು.

ಟ್ರೆಂಡ್ ರಾಷ್ಟ್ರೀಯ ತರಬೇತುದಾರ ಕಯ್ಶೂಮ್ ಮಾಸ್ಟರ್ ಕುಂಡುಕೋಡ್ ಶಿಬಿರ ನಡೆಸಿಕೊಟ್ಟರು. ಇದೆ ಸಂದರ್ಭ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಮಾಸ್ಟರ್ ಅವರನ್ನು ಹಾಗೂ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿಯವರನ್ನು ಶಾಲು ಹೋದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಶಕ್ಷ ಖಾಸಿಂ ದಾರಿಮಿ ಕಿನ್ಶ, ಉಪಾಧ್ಯಕ್ಷರಾದ ಬಹು ತಾಜುದ್ದೀನ್ ರಹ್ಮಾನಿ, ಮುಹಮ್ಮದ್ ಹನೀಫ್ ಧೂಮಳಿಕೆ, ಮಂಗಳೂರು ವಲಯಾಧ್ಶಕ್ಷ ರಿಯಾಝ್ ರಹ್ಮಾನಿ, ಬೆಳ್ತಂಗಡಿ ವಲಯಾಧ್ಶಕ್ಷ ನಝೀರ್ ಅಝ್ಝರಿ, ಅಮೆಮಾರ್ ಶಾಖಾಧ್ಶಕ್ಷ ಮಕ್ಬೂಲ್ ಅಮೆಮಾರ್, ಫರಂಗಿಪೇಟೆ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಮೆಮಾರ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾಸ್ಟರ್ ಸ್ವಾಗತಿಸಿದರು. ಆರೀಫ್ ಬಡಕಬೈಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News