ಮಾಜಿ ಸಂಸದ, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕೆಳನ್ಯಾಯಾಲಯಕ್ಕೆ ಹಿಂತಿರುಗಿಸಿದ ಉಚ್ಚ ನ್ಯಾಯಾಲಯ

Update: 2018-10-23 15:38 GMT

 ಚೆನ್ನೈ,ಅ.23: ಮಾಜಿ ಲೋಕಸಭಾ ಸಂಸದ ಮತ್ತು ಮಾಜಿ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಕೆಳನ್ಯಾಯಾಲಯಕ್ಕೆ ಹಿಂತಿರುಗಿಸಿದೆ. ಪೊಲೀಸ್ ವರದಿಯನ್ನು ಕಡೆಗಣಿಸಿ ಆರೋಪಿಯ ವಿರುದ್ಧ ಸ್ವತಂತ್ರವಾಗಿ ವಿಚಾರಣೆ ನಡೆಸುವ ಅಧಿಕಾರ ಮ್ಯಾಜಿಸ್ಟ್ರೇಟ್‌ಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕಲ್ಲಕುರಿಚಿಯ ಮಾಜಿ ಸಂಸದ ಆದಿಶಂಕರ್ ಹಾಗೂ ಋಷಿವಂದ್ಯಮ್‌ನ ಮಾಜಿ ಶಾಸಕ ಎಸ್. ಶಿವರಾಜ್ ಅವರ ವಿರುದ್ಧದ ದೂರಿನಲ್ಲಿ ಪೊಲೀಸರು ಮುಕ್ತಾಯ ವರದಿ ಸಲ್ಲಿಸಿದುದರ ವಿರುದ್ಧ ಸಲ್ಲಿಸಲಾಗಿದ್ದ ಪ್ರತಿರೋಧ ಅರ್ಜಿಯನ್ನು ಎಗ್ಮೋರ್‌ನ 13ನೇ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅಪರಾಧಿ ನೈಜ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಧೀಶ ಎಂ.ವಿ.ಮುರಳೀಧರನ್ ಈ ನಿರ್ದೇಶನವನ್ನು ನೀಡಿದ್ದಾರೆ. ಆರೋಪಿಯ ವಿರುದ್ಧ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ ಎಂದು ಪೊಲೀಸ್ ವರದಿ ತಿಳಿಸಿದರೂ ಕ್ರಿಮಿನಲ್ ದಂಡ ಸಂಹಿತೆಯ ವಿಧಿ 190(1)(ಬಿ) ಅಡಿ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ಮ್ಯಾಜಿಸ್ಟ್ರೇಟ್‌ಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ತನಿಖಾಧಿಕಾರಿಯು ಸಲ್ಲಿಸಿರುವ ವರದಿಯನ್ನು ನಿರ್ಲಕ್ಷಿಸಿ, ತನಿಖೆಯಿಂದ ಹೊರಬಂದ ಮಾಹಿತಿಯನ್ನು ಆಧರಿಸಿ ತನ್ನದೇ ಬುದ್ಧಿವಂತಿಕೆಯ ಮೂಲಕ ಸ್ವತಂತ್ರವಾಗಿ ವಿಚಾರಣೆ ನಡೆಸುವ ಅಧಿಕಾರ ಮ್ಯಾಜಿಸ್ಟ್ರೇಟ್‌ಗಿದೆ. ಮತ್ತು ಆರೋಪಿಯ ವಿರುದ್ಧ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎಂದು ನ್ಯಾಯಾಧೀಶ ಮುರಳೀಧರನ್ ತಿಳಿಸಿದ್ದಾರೆ. ವಿವಾದವೊಂದಕ್ಕೆ ಸಂಬಂಧಿಸಿದಂತೆ ಸಿವರಾಜ್ ಮತ್ತು ಆದಿಶಕ್ತಿ ನಮ್ಮನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ ಆರ್.ಮೂರ್ತಿ ಮತ್ತವರ ಪತ್ನಿ ಎಂ.ಜಯಂತಿ ನ್ಯಾಯಾಲಯದಲ್ಲಿ ಹಾಕಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News