ಸೌದಿ ಕೌನ್ಸುಲ್ ಜನರಲ್ ಮನೆಯ ತೋಟದಲ್ಲಿ ಪತ್ರಕರ್ತ ಖಶೋಗಿ ದೇಹದ ಭಾಗಗಳು ಪತ್ತೆ: ವರದಿ

Update: 2018-10-23 16:05 GMT

ಲಂಡನ್, ಅ. 23: ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ದೇಹದ ಭಾಗಗಳು ಸೌದಿ ಕೌನ್ಸುಲ್ ಜನರಲ್‌ರ ಇಸ್ತಾಂಬುಲ್‌ನಲ್ಲಿರುವ ಮನೆಯಲ್ಲಿ ಪತ್ತೆಯಾಗಿವೆ ಎಂದು ಬ್ರಿಟನ್‌ನ ‘ಸ್ಕೈ ನ್ಯೂಸ್’ ಮಂಗಳವಾರ ವರದಿ ಮಾಡಿದೆ.

‘ವಾಶಿಂಗ್ಟನ್ ಪೋಸ್ಟ್’ಗೆ ಅಂಕಣಗಳನ್ನು ಬರೆಯುತ್ತಿದ್ದ 59 ವರ್ಷದ ಸೌದಿ ಪತ್ರಕರ್ತನ ದೇಹವನ್ನು ತುಂಡು ತುಂಡು ಮಾಡಲಾಗಿದೆ ಹಾಗೂ ಮುಖವನ್ನು ವಿರೂಪಗೊಳಿಸಲಾಗಿದೆ ಎಂದು ಅದು ಹೇಳಿದೆ.

ಕೌನ್ಸುಲ್ ಜನರಲ್ ಮನೆಯ ತೋಟದಲ್ಲಿ ಅವಶೇಷಗಳು ಪತ್ತೆಯಾಗಿವೆ ಎಂದಿದೆ. ಕೌನ್ಸುಲ್ ಜನರಲ್‌ರ ಮನೆಯ ತೋಟದಲ್ಲಿರುವ ಬಾವಿಯೊಂದರಲ್ಲಿ ಪತ್ರಕರ್ತನ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಸಂದರ್ಶನವೊಂದರಲ್ಲಿ ಟರ್ಕಿಯ ರೊಡಿನ ಪಕ್ಷದ ನಾಯಕ ಡೊಗು ಪೆರಿನ್ಸೆಕ್ ಹೇಳಿದ್ದಾರೆ ಎಂದು ‘ಹ್ಯಾಬರ್ಲರ್’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News