×
Ad

ಎಚ್-1ಬಿ ವೀಸಾಕ್ಕಾಗಿ ಪ್ರಮಾಣಪತ್ರ: ಮುಂಚೂಣಿಯಲ್ಲಿ ಟಿಸಿಎಸ್

Update: 2018-10-23 22:45 IST

ಟಿಸಿಎಸ್‌ಗೆ ವಾಶಿಂಗ್ಟನ್, ಅ. 23: 2018ರ ಹಣಕಾಸು ವರ್ಷಕ್ಕೆ ಎಚ್-1ಬಿ ವೀಸಾಗಳನ್ನು ಪಡೆಯಲು ನೀಡಲಾಗುವ ವಿದೇಶಿ ಕಾರ್ಮಿಕ ಪ್ರಮಾಣಪತ್ರಗಳನ್ನು ಪಡೆದ 10 ಅಗ್ರ ಕಂಪೆನಿಗಳಲ್ಲಿ ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸ್ಥಾನ ಪಡೆದಿದೆ.

ಎಚ್-1ಬಿ ವೀಸಾಗಳಿಗೆ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಲ್ಲಿ ಭಾರೀ ಬೇಡಿಕೆಯಿದೆ.

ಪ್ರಮಾಣಪತ್ರ ಪಡೆದ ಉನ್ನತ 10 ಜಾಗತಿಕ ಕಂಪೆನಿಗಳಲ್ಲಿ ಲಂಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಅರ್ನ್ಸ್ಟ್ ಆ್ಯಂಡ್ ಯಂಗ್’ ಪ್ರಥಮ ಸ್ಥಾನದಲ್ಲಿದೆ.

2018ರ ಹಣಕಾಸು ವರ್ಷಕ್ಕೆ ಎಚ್-1ಬಿ ವೀಸಾಗಳಿಗಾಗಿ ವಿದೇಶಿ ಕಂಪೆನಿಗಳಿಗೆ ನೀಡಲಾಗುವ ಒಟ್ಟು ವಿದೇಶಿ ಕಾರ್ಮಿಕ ಪ್ರಮಾಣಪತ್ರಗಳ 12.4 ಶೇಕಡವನ್ನು ‘ಅರ್ನ್ಸ್ಟ್ ಆ್ಯಂಡ್ ಯಂಗ್’ ಕಂಪೆನಿಗೆ ನೀಡಲಾಗಿದೆ. ಅದು 1,51,164 ಎಚ್-1ಬಿ ವೀಸಾಗಳನ್ನು ಪಡೆದಿದೆ.

ಟಿಸಿಎಸ್ 20,755 ವೀಸಾಗಳಿಗಾಗಿ ಪ್ರಮಾಣಪತ್ರಗಳನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News