×
Ad

ಮಂಗಳನ ದ್ರವ ರೂಪದ ನೀರಿನಲ್ಲಿ ಸಾಕಷ್ಟು ಆಮ್ಲಜನಕ: ಅಧ್ಯಯನ

Update: 2018-10-23 22:50 IST

ವಾಶಿಂಗ್ಟನ್, ಅ. 23: ಮಂಗಳ ಗ್ರಹದ ಮೇಲ್ಮೈಯ ಅಡಿಯಲ್ಲಿರುವ ಉಪ್ಪು ನೀರಿನ ಕೊಳಗಳಲ್ಲಿ, ಸೂಕ್ಷ್ಮಾಣು ಜೀವಿಗಳ ಪೋಷಣೆಗೆ ಸಾಕಾಗುವ ಆಮ್ಲಜನಕ ಇರಬಹುದು ಎಂದು ಅಧ್ಯಯನವೊಂದು ಹೇಳಿದೆ.

ಕೆಂಪು ಗ್ರಹದ ವಾಸಯೋಗ್ಯತೆ ಬಗ್ಗೆ ವಿಜ್ಞಾನಿಗಳು ಪ್ರಸಕ್ತ ಹೊಂದಿರುವ ಅಭಿಪ್ರಾಯಕ್ಕೆ ಈ ಸಂಶೋಧನೆ ವ್ಯತಿರಿಕ್ತವಾಗಿದೆ.

ಹಿಂದಿನ ಅಥವಾ ಈಗಿನ ವಾಸಯೋಗ್ಯ ಪರಿಸರಗಳ ಲಕ್ಷಣಗಳನ್ನು ಶೋಧಿಸುವ ನಿಟ್ಟಿನಲ್ಲಿ ಭವಿಷ್ಯದ ಶೋಧ ನೌಕೆಗಳಿಗೆ ಸೂಚನೆ ನೀಡಲು ಈ ಅಧ್ಯಯನವನ್ನು ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News