ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಕ್ಯಾಂಪಸ್ ವಿಂಗ್ ಸಮಿತಿ ಅಸ್ತಿತ್ವಕ್ಕೆ

Update: 2018-10-24 07:24 GMT

ಬೆಳ್ತಂಗಡಿ, ಅ.24: ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಕ್ಯಾಂಪಸ್ ವಿಂಗ್ ಬಿಸ್ಮಿಲ್ಲಾ ಮೆಂಬರ್ ಶಿಪ್ ಕ್ಯಾಂಪೈನ್ ಇತ್ತೀಚೆಗೆ ಇಲ್ಲಿನ ದಾರುಸ್ಸಲಾಂ ಎಜುಕೇಶನ್ ಸೆಂಟರ್‌ನಲ್ಲಿ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಅಧ್ಯಕ್ಷ ನಝೀರ್ ಅಝ್ಹರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಂಸುದ್ದೀನ್ ದಾರಿಮಿ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸ್ವದಕತುಲ್ಲಾ ಫೈಝಿ ಮಾತನಾಡಿ, ಕ್ಯಾಂಪಸ್ ವಿಂಗ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಇದೇ ಸಂದರ್ಭ ಕ್ಯಾಂಪಸ್ ವಿಂಗ್ ಕಾರ್ಯದರ್ಶಿ ಝೈದ್ ಖಲಂದರಿಯ್ಯಾರಿಗೆ ಕ್ಯಾಂಪಸ್ ವಿಂಗ್ ಸದಸ್ಯತ್ವ ಅರ್ಜಿ ಫಾರಂ ನೀಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.

ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಕ್ಯಾಂಪಸ್ ವಿಂಗ್ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮನ್ಸೂರ್ ಕಕ್ಕಿಂಜೆ, ಉಪಾಧ್ಯಕ್ಷರಾಗಿ ರಿಝ್ವಿನ್ ಪುಂಜಾಲಕಟ್ಟೆ ಹಾಗೂ ರಾಝಿಕ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಮುಬಾರಿಶ್ ಬೆಳ್ತಂಗಡಿ, ವರ್ಕಿಂಗ್ ಸೆಕ್ರೆಟರಿಯಾಗಿ ಜುನೈದ್ ಕಕ್ಕಿಂಜೆ, ಕೋಆಡಿನೇಟರ್‌ರಾಗಿ ಝೈದ್ ಖಲಂದರಿಯ್ಯಿ ಕಾಜೂರು, ಕೋಶಾಧಿಕಾರಿಯಾಗಿ ಶಂಸುದ್ದೀನ್ ಮಡಂತ್ಯಾರು ಹಾಗೂ ಸದಸ್ಯರಾಗಿ ಬೆಳ್ತಂಗಡಿ ವಲಯಕ್ಕೊಳಪಟ್ಟ ಎಲ್ಲಾ ಶಾಖೆಗಳಿಂದ ತಲಾ ಓರ್ವರನ್ನು ಆಯ್ಕೆ ಮಾಡಲಾಯಿತು ಅಲ್ಲದೆ ಬೆಳ್ತಂಗಡಿ ವಲಯದ ಎಲ್ಲಾ ಕಾಲೇಜುಗಳಿಗೆ ಓರ್ವ ವಿದ್ಯಾರ್ಥಿಯನ್ನು ಉಸ್ತುವಾರಿಯಾಗಿ ನಿಯೋಜಿಸಲಾಯಿತು.

ಸಮಾರಂಭದಲ್ಲಿ ಎಸ್ಕೆಎಸ್ಸೆಸ್ಸೆಫ್ ವಲಯ ಕಾರ್ಯದರ್ಶಿ ರಿಯಾಝ್ ಫೈಝಿ, ಸಿರಾಜ್ ಚಿಲಿಂಬಿ, ಬೆಳ್ತಂಗಡಿ ಕ್ಲಸ್ಟರ್ ಅಧ್ಯಕ್ಷ ರಝಾಕ್ ಮುಸ್ಲಿಯಾರ್, ವಲಯ ಉಪಾಧ್ಯಕ್ಷ ಬಶೀರ್ ದಾರಿಮಿ, ಮಡಂತ್ಯಾರು ಕ್ಲಸ್ಟರ್ ಅಧ್ಯಕ್ಷ ಹಕೀಂ ಬಂಗೇರಕಟ್ಟೆ, ದಾರುಸ್ಸಲಾಮ್‌ನ ಇಸ್ಹಾಕ್ ಕೌಸರಿ, ವಲಯ ವಿಖಾಯ ಅಧ್ಯಕ್ಷ ಶೌಕತ್ ಅಲಿ ಬೆಳ್ತಂಗಡಿ, ವಲಯ ಟ್ರೆಂಡ್ ಕಾರ್ಯದರ್ಶಿ ತೌಸೀಫ್ ಮಾಸ್ಟರ್, ಬಶೀರ್ ಬಲ್ಲಮಂಜ, ಅಬ್ಬಾಸ್ ಚಾರ್ಮಾಡಿ, ರಫೀಕ್ ಮಂಗಳ, ಇಲ್ಯಾಸ್ ಅಝ್ಹರಿ, ಅಬ್ದುಲ್ಲಾ ಪುಂಜಾಲಕಟ್ಟೆ, ಸ್ವದಕತುಲ್ಲಾ ದಾರಿಮಿ ಕಕ್ಕಿಂಜೆ, ಹಮೀದ್ ಮುಸ್ಲಿಯಾರ್ ಸೋಮಂತಡ್ಕ, ಮುನೀರ್ ನೆಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News