ಐಐಟಿ ವಿದ್ಯಾರ್ಥಿ ನೇಣಿಗೆ ಶರಣು
Update: 2018-10-25 21:43 IST
ಮಿಡ್ನಾಪುರ, ಅ. 25: ಖರಗ್‌ಪುರ ಐಐಟಿಯ 24 ವರ್ಷದ ಎಂಟೆಕ್ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ವಿದಾರ್ಥಿಯನ್ನು ಆಂಧ್ರಪ್ರದೇಶದ ರೈತ ಪುತ್ರ ಜಿ. ಅಮಿನಿ ರೆಡ್ಡಿ ಎಂದು ಗುರುತಿಸಲಾಗಿದೆ.
ಅವರ ಕೊಠಡಿಯಲ್ಲಿ ಇನ್ನೊಬ್ಬ ವಿದ್ಯಾರ್ಥಿ ಕೂಡ ಇದ್ದ. ಸಹ ವಿದ್ಯಾರ್ಥಿ ಬುಧವಾರ ರೆಡ್ಡಿಯನ್ನು ಕಾಲೇಜಿನ ಕ್ಯಾಂಪಸ್‌ನಲ್ಲಿ ನೋಡಿರಲಿಲ್ಲ. ಹಾಸ್ಟೆಲ್ ಕೊಠಡಿಗೆ ಹಿಂದಿರುಗಿದಾಗ ಒಳಗಿನಿಂದ ಬಾಗಿಲು ಹಾಕಲಾಗಿತ್ತು. ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೂಡಲೇ ಅವರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು ಎಂದು ಪೊಲೀಸ್ ಅಧೀಕ್ಷಕ ಅಲೋಕ್ ರಾಜೋರಿಯಾ ತಿಳಿಸಿದ್ದಾರೆ. ಪೊಲೀಸರು ಹಾಸ್ಟೆಲ್‌ಗೆ ಆಗಮಿಸಿ ಕೊಠಡಿಯ ಬಾಗಿಲು ಮುರಿದಾಗ ಸೀಲಿಂಗ್ ಫ್ಯಾನ್‌ನಲ್ಲಿ ರೆಡ್ಡಿ ಮೃತದೇಹ ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ.