ನಿಷೇಧಿತ ಉಲ್ಫಾ ಬಣ ಸೇರಿದ ಎಎಎಸ್‌ಯು ನಾಯಕ

Update: 2018-10-25 16:19 GMT

ಗುವಾಹತಿ, ಅ. 25: ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಎಎಸ್‌ಯು)ದ ನಾಯಕ ಸೇನಾ ಸಮವಸ್ತ್ರ ಧರಿಸಿದ ಹಾಗೂ ಅಸಾಲ್ಟ್ ರೈಫಲ್ ತಿರುಗಿಸುತ್ತಿರುವ ವೀಡಿಯೊ ದೃಶ್ಯ ಅಸ್ಸಾಂನಲ್ಲಿ ವೈರಲ್ ಆಗಿದೆ. ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ ಎಎಎಸ್‌ಯು ನಾಯಕ ಪಂಕಜ್ ಪ್ರೋತಿಮ್ ದತ್ತ್ ತಾನು ನಿಷೇಧಿತ ಉಗ್ರ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಸ್ವತಂತ್ರ) (ಉಲ್ಫಾ)ಗೆ ಸೆರಿರುವುದಾಗಿ ಪ್ರತಿಪಾದಿಸಿದ್ದಾರೆ.

ಸೆಪ್ಟಂಬರ್‌ನಿಂದ ದತ್ತಾ ಅವರು ನಾಪತ್ತೆಯಾಗಿದ್ದರು. ಅವರ ಹೆಸರಿನಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ಒಂದೂವರೆ ತಿಂಗಳ ಹಿಂದೆ ಅವರು ಉಲ್ಫಾ (ಐ)ಗೆ ಸೇರಿದ್ದಾನೆ ಎಂಬುದು ನಮಗೆ ತಿಳಿದಿದೆ. ಅನಂತರ ಅವರು ನಾಪತ್ತೆಯಾಗಿದ್ದಾನೆ. ಕೊನೆಗೆ ಇದ್ದ ಸ್ಥಳ ಮೇಲ್ ಅಸ್ಸಾಂನ ತೀನ್‌ಸುಕಿಯಾ’’ ಎಂದು ಗೋಲಾಘಾಟ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧ್ರುಬಾ ಬೋರಾ ತಿಳಿಸಿದ್ದಾರೆ. ದತ್ತಾ ಗೋಲ್ಘಾಟ್ ಜಿಲ್ಲೆಯ ಎಎಎಸ್‌ಯುನ ದೇರ್ಗಾಂವ್ ಘಟಕದ ಉಪಾಧ್ಯಕ್ಷರಾಗಿ ಇತ್ತೀಚಿಗಿನ ವರೆಗೆ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News