ಎರಡು ಚೀನಾ ಹೆಲಿಕಾಪ್ಟರ್‌ಗಳಿಂದ ಸೀಮೋಲ್ಲಂಘನೆ

Update: 2018-10-25 16:27 GMT

ಹೊಸದಿಲ್ಲಿ, ಅ. 25: ಚೀನಾ ಹಾಗೂ ಭಾರತದ ನಡುವಿನ ನೈಜ ಗಡಿ ನಿಯಂತ್ರಣ ರೇಖೆಯನ್ನು ಚೀನಾದ ಎರಡು ಹೆಲಿಕಾಪ್ಟರ್‌ಗಳು ಸೆಪ್ಟಂಬರ್ 27ರಂದು ದಾಟಿವೆ ಎಂದು ಮೂಲಗಳು ತಿಳಿಸಿವೆ.

ಟಿಬೇಟ್‌ನೊಂದಿಗೆ ಲಡಾಕ್ ಅನ್ನು ಜೋಡಿಸುವ ಟ್ರೇಡ್ ಜಂಕ್ಷನ್ ಎಂದು ಕೂಡ ಕರೆಯಲಾಗುವ ಲಡಾಕ್ ಟ್ರಿಕ್ ಹೈಟ್ಸ್‌ನ ಸಮೀಪ ಈ ಸೀಮೋಲ್ಲಂಘನೆ ನಡೆದಿದೆ. ಚೀನಾದ ಎರಡು ಹೆಲಿಕಾಪ್ಟರ್‌ಗಳು ಹಿಂದಿರುಗುವು ದಕ್ಕಿಂತ ಮೊದಲು ಸುಮಾರು 10 ನಿಮಿಷಗಳ ಕಾಲ ಭಾರತಕ್ಕೆ ಸೇರಿದ ಪ್ರದೇಶದಲ್ಲಿ ಹಾರಾಟ ನಡೆಸಿತು ಎಂದು ಮೂಲಗಳು ತಿಳಿಸಿವೆ.

ಜಮ್ಮು ಹಾಗೂ ಕಾಶ್ಮೀರದ ಪೂಂಛ್ ವಲಯದ ಭಾರತೀಯ ವಾಯು ಪ್ರದೇಶವನ್ನು ಪಾಕಿಸ್ತಾನ ಉಲ್ಲಂಘಿಸಿದ ಬಳಿಕ ಈ ಘಟನೆ ನಡೆದಿದೆ. ಗುಲ್ಪುರ ವಲಯದ ಒಳಗೆ ಚೀನಾದ ಎರಡು ಬಿಳಿ ಬಣ್ಣದ ಹೆಲಿಕಾಪ್ಟರ್ ಪ್ರವೇಶಿಸಿತು ಹಾಗೂ ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News