ವಿಜ್ಞಾನ, ತಂತ್ರಜ್ಞಾನ, ಜೀವನ ಸಮಾನಾಂತರವಾಗಿ ಸಾಗಲಿ: ಪಾತೂರ್

Update: 2018-10-27 15:08 GMT

ಶಿರ್ವ, ಅ.27: ಬದುಕನ್ನು ಸುಗಮವಾಗಿಸಿರುವ ತಂತ್ರಜ್ಞಾನವು ಮನುಷ್ಯ ನನ್ನು ಸೋಮಾರಿಯನ್ನಾಗಿ ಕೂಡ ಮಾಡಿದೆ. ಹೀಗಾಗಿ ವಿಜ್ಞಾನ ತಂತ್ರಜ್ಞಾನ ಮತ್ತು ಜೀವನ ಸಮಾನಾಂತರವಾಗಿ ಮುಂದುವರಿಯುವ ಅಗತ್ಯ ಇದೆ ಎಂದು ಬೆಂಗಳೂರು ತಯಾನಾ ಸಾಪ್ಟ್‌ವೇರ್ ಸೊಲ್ಯುಶನ್‌ನ ಮುಖ್ಯ ತಾಂತ್ರಿಕ ಅಧಿಕಾರಿ ರತನ್‌ರಾವ್ ಪಾತೂರ್ ಹೇಳಿದ್ದಾರೆ.

ಬಂಟಕಲ್ಲಿನ ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಎಸ್ ಟಿಇ ವಿದ್ಯಾರ್ಥಿ ಘಟಕ, ಐಐಓಟಿ ಕ್ಲಬ್ ಮತ್ತು ಐಇಇಇ ಮಂಗಳೂರು ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾಲಯದಲ್ಲಿ ಆಯೋಜಿಸಲಾದ ಐಐಒಟಿ ವಿಚಾರ ಸಂಕಿರಣ ಮತ್ತು ಐಒಟಿ ಮಾದರಿ ವಸ್ತು ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಮಂಗಳೂರಿನ ಇನ್ಫೋಸಿಸ್ ಸಂಸ್ಥೆಯ ನಿರ್ದೇಶಕ ಕೃಷ್ಣರಾಜ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ.ರಾಧಾಕೃಷ್ಣ ಎಸ್.ಐತಾಳ್ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ವಿಷ್ಣು ವಂದಿಸಿದರು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿ ತಂಡಗಳು ತಮ್ಮ ತಾಂತ್ರಿಕ ಮಾದರಿ ಗಳನ್ನು ಪ್ರದರ್ಶಿಸಿದವು. ತೀರ್ಪುಗಾರರಾಗಿ ಸಿಸ್ಕೋ ಸಂಸ್ಥೆಯ ರಾಕೇಶ್ ಶಿರಿಯಾರ, ರೋಬೋಸಾಪ್ಟ್ ಸಂಸ್ಥೆಯ ಶ್ರೀಪಾದ ಹೆಬ್ಬಾರ್, ಹಿರಿಯ ವಿಜ್ಞಾನಿ ಚಂದ್ರಕಾಂತ್ ಸಖರ್ವಾಡೆ, ಮಣಿಪಾಲ್ ಡಾಟ್‌ನೆಟ್ ಸಂಸ್ಥೆಯ ಪವಿತ್ರಾ ನಾಯಕ್, ಸಿಜು ವಿ.ಸೋಮನ್, ಚಂದ್ರಶೇಖರ್  ರಾವ್ ಕುತ್ಯಾರ್ ಭಾಗವಹಿಸಿದ್ದರು.

ಸಮಾರೋಪ: ಮಣಿಪಾಲದ ಮಣಿಪಾಲ್ ಡಾಟ್ ಕಂಪೆನಿಯ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಪ್ರಶಾಂತ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ವಹಿಸಿದ್ದರು. ರಸಾಯನ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಶ್ರೀನಿವಾಸನ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಯೋಜಕ ಸಮನ್ವಿತ ಭಾಗವತ್ ಸ್ವಾಗತಿಸಿ, ಡಾ.ವಾಸುದೇವ ವಂದಿಸಿದರು. ಹರಿಪ್ರಿಯ ಐತಾಳ್ ಬಹುಮಾನ ವಿಜೇತರ ವಿವರ ನೀಡಿದರು. ತನುಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬಂಟಕಲ್ ಶ್ರೀಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ದೀಪಕ್ ನಾಯಕ್, ಉಲ್ಲಾಸ್, ಸೌರಭ್ ಶೆಟ್ಟಿ, ಅಭಿಜಿತ್ ಸೇರಿಗಾರ್ ತಯಾರಿಸಿದ ‘ಭ್ರಾತ್ಯ’ ಮಾದರಿ 10,000ರೂ. ನಗದು ಬಹು ಮಾನದೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಯಹ್ಯ ಅಸಾದಿ, ಶುಭಂ, ಗಗನ್ ಬಾಬು ತಯಾರಿಸಿದ ಬಯೋ ರೋಬೊ-ದಿ ಸೇವೇಜ್ ಕ್ಲೀನಿಂಗ್ ಬೋಟ್ ಮಾದರಿ ದ್ವಿತೀಯ, ಲತೀಶ್ ಭಾಸ್ಕರ್ ಮತ್ತು ತಂಡ ತಯಾರಿಸಿದ ಅಟೋಮೇಟೆಡ್ ವ್ಯಾಕುಮ್ ಆಂಡ್ ಫ್ಲೋರ್ ಕ್ಲೀನರ್ ತೃತೀಯ, ಪ್ರೀತಮ್ ಮತ್ತು ತಂಡ ತಯಾರಿಸಿದ ಸ್ಮಾರ್ಟ್ ರೋಡ್ ನಾಲ್ಕನೆ ಹಾಗೂ ವಿಮಿತ ಮತ್ತು ತಂಡ ತಯಾರಿಸಿದ ಸ್ಮಾರ್ಟ್ ವೇ ಆಫ್ ಮೋನಿಟರಿಂಗ್ ಗ್ಲೋಕೋಸ್ ಬಾಟಲ್ ಲೆವೆಲ್ ಇನ್ ದಿ ಹಾಸ್ಪಿಟಲ್ ಮಾದರಿಯು ಐದನೆ ಸ್ಥಾನವನ್ನು ಪಡೆದುಕೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News