ಹೆಬ್ರಿ: ಗ್ರಾಪಂನ ಸೋಲಾರ್ ಬ್ಯಾಟರಿ ಕಳವು

Update: 2018-10-27 15:11 GMT

ಹೆಬ್ರಿ, ಅ.27: ನಾಲ್ಕೂರು ಗ್ರಾಪಂ ವ್ಯಾಪ್ತಿಯ ಮೀಯಾರು ಎಂಬಲ್ಲಿ ಆಳವಡಿಸಲಾದ ಒಟ್ಟು ಎಂಟು ಸೋಲಾರ್ ಬ್ಯಾಟರಿಗಳನ್ನು ಅ.24 ರಂದು ರಾತ್ರಿ ವೇಳೆ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಮೀಯಾರಿನ ಬಡಿಯ ನಾಯ್ಕ್ರ ಮನೆಯ ಬಳಿ, ಚಾಕ್ಟಿಕಟ್ಟೆ ಗೋವಿಂದ ನಾಯ್ಕರ ಮನೆ ಬಳಿ, ಮೀಯಾರು ಕಲ್ಮನೆಗೆ ಹೋಗುವ ರಸ್ತೆಯ ಬಳಿ, ಮೀಯಾರು ವಿಠಲ ಶೆಟ್ಟಿ ಮನೆ ಬಳಿ, ಮೀಯಾರು ಗೋಪಾಲರ ಮನೆ ಬಳಿ, ಮೀಯಾರು ದಾಸಾನುಕಟ್ಟೆ ಅಂಗನವಾಡಿ ಬಳಿ, ಮೀಯಾರು ಮುಕುಂದ ನಾಯ್ಕ್ರ ಮನೆಯ ಬಳಿ ಆಳವಡಿಸಲಾದ ಸುಮಾರು 48ಸಾವಿರ ರೂ. ವೌಲ್ಯದ ಒಟ್ಟು 8 ಸೋಲಾರ್ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಪಂಚಾ ಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಎಚ್.ಆರ್. ನೀಡಿರುವ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News