ಬ್ರಹ್ಮಾವರ: ಕ್ರೀಡಾ ಮಾಹಿತಿ ಕಾರ್ಯಾಗಾರ

Update: 2018-10-28 15:43 GMT

ಬ್ರಹ್ಮಾವರ, ಅ.28: ಎಕ್ತಾ ಇವೆಂಟ್ ಮ್ಯಾನೇಜ್‌ಸೆಂಟ್ ಸಂಸ್ಥೆಯ ವತಿ ಯಿಂದ ಕ್ರೀಡಾ ಮಾಹಿತಿ ಕಾರ್ಯಾಗಾರವನ್ನು ಬ್ರಹ್ಮಾವರ ಮದರ್ ಪ್ಯಾಲೇಸ್ ನಲ್ಲಿ ರವಿವಾರ ಆಯೋಜಿಸಲಾಗಿತ್ತು.

ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮಾತನಾಡಿ, ಕ್ರೀಡೆಗೆ ಸಂಬಂಧಿಸಿ ಸರಕಾರದ ವತಿಯಿಂದ ಹಲವು ಯೋಜನೆಗಳಿದ್ದು, ಕ್ರೀಡಾಪಟುಗಳು ಅದರ ಪ್ರಯೋಜನ ಪಡೆಯಲು ಮುಂದಾಗಬೇಕು. ಪೋಷಕರು ಮಕ್ಕಳಿಗೆ ಕ್ರೀಡೆ ಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕೆ ಹೊರತು ಅವರನ್ನು ಪಠ್ಯಕ್ಕೆ ಮಾತ್ರ ಸೀಮಿತಗೊಳಿಸಿ, ಅವರ ಪ್ರತಿಭೆಯನ್ನು ಮೊಟಕುಗೊಳಿಸಬಾರದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ಗ್ರಾಮೀಣ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳ್ಳಲು ಸಹಕಾರಿಯಾಗುತ್ತದೆ ಆದರೆ ಇಂದು ಮೊಬೈಲ್ ಗೇಮ್ಸ್ ಆಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಜೀವನದಿಂದ ವಿಮುಖರಾಗುತ್ತಿದ್ದಾರೆ ಎಂದು ತಿಳಿಸಿದರು.

ಬ್ರಹ್ಮಾವರ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಹಾಗೂ ಕ್ರಿಕೆಟ್ ಕೋಚ್ ವಿಜಯ ಆಳ್ವ, ಬಾರಕೂರು ನ್ಯಾಷನಲ್ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಜಯಭಾರತಿ, ಉಡುಪಿ ಬಾಡಿ ಬಿಲ್ಡಿಂಗ್ ಅಸೋಸಿ ಯೇಶನ್‌ನ ಖಜಾಂಚಿ ವಿಶ್ವನಾಥ್ ಕಾಮತ್ ಮಾತನಾಡಿದರು. ವಫಾ ಹೊನ್ನಾಳ ಸ್ಪೋರ್ಟ್ಸ್‌ನ ಮಹತ್ವ ಹಾಗೂ ಕ್ಲೀನ್ ಆ್ಯಂಡ್ ಗ್ರೀನ್ ಸಂಸ್ಥೆಯ ಬಗ್ಗೆ ಕಿರು ಪರಿಚಯ ನೀಡಿದರು.

ಫ್ರಾನ್ಸಿಸ್ ಬೆಳ್ಮಣ್, ಜಹೀರ್ ಅಬ್ಬಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖಲೀಲ್ ಕೆರಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಲಕ್ ಪೂಜಾರಿ ಸ್ವಾಗತಿಸಿದರು. ಪದ್ಮಾ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News