ಯಕ್ಷಗುರು ಕೂಡ್ಲಿಗೆ ‘ಯಕ್ಷ ಕಲಾ ಸಿಂಧು ಪುರಸ್ಕಾರ’ ಪ್ರದಾನ

Update: 2018-10-28 15:51 GMT

ಬ್ರಹ್ಮಾವರ, ಅ.28: ಹಾವಂಜೆ ಭಾವನಾ ಪ್ರತಿಷ್ಠಾನದ ವತಿಯಿಂದ ಭಾವನಾ ಕಲಾ ಶಾಲೆಯ ಭಾವನಾ ಯಕ್ಷರಂಗದ ಉದ್ಘಾಟನೆ, ಯಕ್ಷ ಕಲಾ ಸಿಂಧು ಪುರಸ್ಕಾರ, ಸನ್ಮಾನ ಹಾಗೂ ಸದಸ್ಯರಿಂದ ಯಕ್ಷಗಾನ ಪ್ರದರ್ಶನವನ್ನು ಶನಿವಾರ ಹಾವಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ಬಿ.ಗೋಪಾಲಕೃಷ್ಣ ಸಾಮಗ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಗುರು ದೇವದಾಸ್ ರಾವ್ ಕೂಡ್ಲಿಗೆ ‘ಯಕ್ಷ ಕಲಾ ಸಿಂಧು ಪುರಸ್ಕಾರ’ ರಜತ ಪದಕ ನೀಡಿ ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಶಕುಂತಳಾ ಆರ್. ಹೆಗ್ಡೆ, ಉದ್ಯಮಿ ದೋಗು ಪೂಜಾರಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಮಹಾ ಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್ ಬಿ.ಶೆಟ್ಟಿ ವಹಿಸಿದ್ದರು. ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಹಾವಂಜೆ ಮಂಜುನಾಥ ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಂದರ್ ಕೋಟ್ಯಾನ್ ಸನ್ಮಾನ ಪತ್ರ ವಾಚಿಸಿದರು. ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News