×
Ad

ಸ್ವಿಟೋಲಿನಾ ಮುಡಿಗೆ ಡಬ್ಲುಟಿಎ ಫೈನಲ್ಸ್

Update: 2018-10-28 23:59 IST

ಕಿರೀಟ ಸಿಂಗಾಪುರ, ಅ.28: ವರ್ಷಾಂತ್ಯದ ಮಹಿಳಾ ಟೆನಿಸ್ ಟೂರ್ನಿ ಡಬ್ಲುಟಿಎ ಫೈನಲ್ಸ್ ನಲ್ಲಿ ಅಮೆರಿಕದ ಸ್ಲೋಯಾನೆ ಸ್ಟೀಫನ್ಸ್‌ರನ್ನು ಮಣಿಸಿದ ಎಲಿನಾ ಸ್ವಿಟೋಲಿನಾ ವೃತ್ತಿಬದುಕಿನ ಅತ್ಯಂತ ದೊಡ್ಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ರವಿವಾರ 2 ಗಂಟೆ, 23 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ ಸ್ವಿಟೋಲಿನಾ ಅವರು ಸ್ಟೀಫನ್ಸ್‌ರನ್ನು 3-6, 6-2, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು. 2013ರ ಬಳಿಕ ಅಜೇಯ ಗೆಲುವಿನ ದಾಖಲೆಯೊಂದಿಗೆ ಪ್ರಶಸ್ತಿ ಸುತ್ತಿಗೇರಿದ ಮೊದಲ ಆಟಗಾರ್ತಿ ಸ್ವಿಟೋಲಿನಾ. 5 ವರ್ಷಗಳ ಹಿಂದೆ ಸೆರೆನಾ ವಿಲಿಯಮ್ಸ್ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News