ಎಸ್ಸೆಸ್ಸೆಫ್ ಆಲಡ್ಕ ಶಾಖೆ ವತಿಯಿಂದ ಯುನಿಟ್ ಕಾನ್ಫರೆನ್ಸ್, ಮಹ್ಳರತುಲ್ ಬದ್ರಿಯ್ಯಾ ಕಾರ್ಯಕ್ರಮ

Update: 2018-10-29 12:47 GMT

ಬಂಟ್ವಾಳ,ಅ.29: ಎಸ್ಸೆಸ್ಸೆಫ್ ಆಲಡ್ಕ ಶಾಖೆಯ ವತಿಯಿಂದ 'ಯೌವ್ವನ ಮರೆಯಾಗುವ ಮುನ್ನ' ಎಂಬ ಧ್ಯೇಯ ವಾಕ್ಯದಡಿ ಯುನಿಟ್ ಕಾನ್ಫರೆನ್ಸ್ ಮತ್ತು ಮಹ್ಳರತುಲ್ ಬದ್ರಿಯ್ಯಾ ಕಾರ್ಯಕ್ರಮ ಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಪಿ.ಎಸ್ ಮುಝಮ್ಮಿಲ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸ್ಥಳೀಯ ಬದ್ರಿಯಾ ಜುಮಾ ಮಸ್ಜಿದ್ ಮುದರ್ರಿಸ್ ಅಶ್ರಫ್ ಸಖಾಫಿ ಸವಣೂರು ದುಆ ಮತ್ತು ಉದ್ಘಾಟನೆ ನೆರವೇರಿಸಿದರು. ಹುಸೈನ್ ಮುಈನಿ ಅಲ್ ಅಹ್ಸನಿ ಮುಖ್ಯ ಭಾಷಣ ಮಾಡಿದರು.ಎಸ್.ವೈ.ಎಸ್ ಪಾಣೆಮಂಗಳೂರು ಸೆಂಟರ್ ಅಧ್ಯಕ್ಷ ರಫೀಕ್ ಹಾಜಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆ ಅಂಗಡಿ ಮಾತನಾಡಿದರು.

ನಂತರ ಬಂಟ್ವಾಳ ಡಿವಿಷನ್ ಅಧ್ಯಕ್ಷ ರಶೀದ್ ಹಾಜಿ ವಗ್ಗ ಮಾತನಾಡಿ, ನವೆಂಬರ್ 1ರಿಂದ 15ರ ವರೆಗೆ ನಡೆಯುವ ಸದಸ್ಯತನ ಅಭಿಯಾನದ ಕುರಿತು ಮಾಹಿತಿ ನೀಡಿದರು ಹಾಗೂ ಡಿಸೆಂಬರ್‌ 3ರಂದು ನೆಹರೂ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ಯಶಸ್ವಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಉಪಾಧ್ಯಕ್ಷ ಅಕ್ಬರ್ ಅಲೀ ಮದನಿ, ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ, ಸೆಕ್ಟರ್ ಅಧ್ಯಕ್ಷ ಯಹ್ಯಾ ಮದನಿ, ಎಸ್.ವೈ.ಎಸ್ ಪಾಣೆಮಂಗಳೂರು ಸೆಂಟರ್ ನಾಯಕರಾದ ಪಿ.ಐ ಅಬ್ದುಲ್ ಹಮೀದ್ ಹಾಜಿ, ಅಬ್ದುಲ್ಲ‌ ಕೊಳಕೆ, ಸ್ಥಳೀಯ ಮಸೀದಿ ಅಧ್ಯಕ್ಷ ಡಾ.ಎಂ ಎಂ ಶರೀಫ್ ಮುಂತಾದವರು ಉಪಸ್ಥಿತರಿದ್ದರು. ಪಿ.ಎಸ್ ತ್ವಾಹಾ ಸಅದಿ ಸ್ವಾಗತಿಸಿ, ರಹ್ಮತುಲ್ಲಾ ಸಿದ್ದೀಖ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News