ದಿಲ್ಲಿ ವಾಯು ಗುಣಮಟ್ಟ ‘ಗಂಭೀರ’ : ಈ ಋತುಮಾನದಲ್ಲಿ ಇದೇ ಮೊದಲು

Update: 2018-10-30 16:12 GMT

ಹೊಸದಿಲ್ಲಿ, ಅ. 30: ನೆರೆಯ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ದಹನ ತೀವ್ರಗೊಂಡಿರುವುದರಿಂದ ಈ ಋತುಮಾನದಲ್ಲಿ ಮಂಗಳವಾರ ಮೊದಲ ಬಾರಿಗೆ ದಿಲ್ಲಿಯಲ್ಲಿ ವಾಯು ಗುಣಮಟ್ಟ ‘ಗಂಭೀರ’ವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ವಾಯು ಗುಣಮಟ್ಟ ಸೂಚ್ಯಂಕ (ಏಯರ್ ಕ್ವಾಲಿಟಿ ಇಂಡೆಕ್ಸ್ -ಐಕ್ಯೂಐ) 401ಕ್ಕೆ ತಲುಪುವ ಮೂಲಕ ದಿಲ್ಲಿ ಈ ಋತುಮಾನದ ‘ಗಂಭೀರ’ ಸ್ಥಿತಿಗೆ ತಲುಪಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರಕಾರ ನಡೆಸುತ್ತಿರುವ ವಾಯು ಗುಣಮಟ್ಟ ಪ್ರಸಾರ ಹಾಗೂ ಸಂಶೋಧನೆ (ಎಸ್‌ಎಎಫ್‌ಎಆರ್) ದಾಖಲಿಸಿದ ದಿಲ್ಲಿಯ ವಾಯು ಗುಣಮಟ್ಟ 410. ಎಕ್ಯೂಐ ಪ್ರಕಾರ ವಾಯು ಗುಣಮಟ್ಟ 0 ಹಾಗೂ 5 ನಡುವೆ ಉತ್ತಮ, 51ರಿಂದ 100ರ ನಡುವೆ ತೃಪ್ತಿದಾಯಕ, 101ರಿಂದ 200ರ ನಡುವೆ ‘ಸಾಮಾನ್ಯ’, 201ರಿಂದ 300 ಕಳಪೆ, 300ರಿಂದ 400 ತುಂಬಾ ಕಳಪೆ, 401ರಿಂದ 500 ಗಂಭೀರ. ವಾಯುಗುಣಮಟ್ಟ ಆನಂದ ವಿಹಾರದಲ್ಲಿ ಸಂಜೆ 4 ಗಂಟೆಗೆ ಅತಿ ಹೆಚ್ಚು 467 ಎಕ್ಯೂಐ ದಾಖಲಾಗುವುದರೊಂದಿಗೆ ದಿಲ್ಲಿಯ 18 ಪ್ರದೇಶಗಳಲ್ಲಿ ವಾಯು ಗುಣಮಟ್ಟ ‘ಗಂಭೀರ’ವಾಗಿದೆ ಎಂದು ಸಿಪಿಸಿಬಿ ದತ್ತಾಂಶ ಹೇಳಿದೆ.

ಫರೀದಾಬಾದ್, ಗಾಝಿಯಾಬಾದ್, ಗುರುಗಾಂವ್ ಹಾಗೂ ನೋಯ್ಡದಲ್ಲಿ ‘ಗಂಭೀರ’ ವಾಯು ಗುಣಮಟ್ಟ ದಾಖಲಾಗಿದೆ. ಗ್ರೇಟರ್ ನೋಯ್ಡದಲ್ಲಿ ಕೂಡ ವಾಯು ಗುಣಮಟ್ಟ ‘ಗಂಭೀರ’ ಸ್ಥಿತಿಗೆ ತಿರುಗುತ್ತಿದೆ ಎಂದು ದತ್ತಾಂಶ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News