×
Ad

ಮುಝಪ್ಫರ್‌ಪುರ ಆಶ್ರಯಧಾಮ ಪ್ರಕರಣ: ಪ್ರಧಾನ ಆರೋಪಿಯ ವರ್ಗಾವಣೆಗೆ ಸುಪ್ರೀಂ ಆದೇಶ

Update: 2018-10-30 21:53 IST

ಹೊಸದಿಲ್ಲಿ, ಅ. 30: ಮುಝಪ್ಫರ್‌ಪುರ ಆಶ್ರಯ ಧಾಮ ಲೈಂಗಿಕ ಹಗರಣದ ಪ್ರಧಾನ ಆರೋಪಿಯಾಗಿರುವ ಬ್ರಿಜೇಶ್ ಠಾಕೂರ್ ಅವರನ್ನು ಪಂಜಾಬ್‌ನ ಪಾಟಿಯಾಲದ ಅತ್ಯುಚ್ಚ ಭದ್ರತೆಯ ಕಾರಾಗೃಹಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಮುಝಪ್ಫರ್‌ಪುರ ಆಶ್ರಯ ಧಾಮ ಲೈಂಗಿಕ ಹಗರಣದ ಬಗ್ಗೆ ಸಿಬಿಐ ನೀಡಿದ ಸ್ಥಿತಿಗತಿ ವರದಿಯ ಆಘಾತಕಾರಿ ವಿಚಾರಗಳ ಹಿನ್ನೆಲೆಯಲ್ಲಿ ಠಾಕೂರ್ ಅವರನ್ನು ಬಿಹಾರ್‌ನಿಂದ ಹೊರಗೆ ವರ್ಗಾಯಿಸಲು ನ್ಯಾಯಾಲಯ ಕಳೆದ ವಾರ ಪರಿಗಣಿಸಿತ್ತು.

ಮುಂಜು ವರ್ಮಾರನ್ನು ಯಾಕೆ ಬಂಧಿಸಿಲ್ಲ: ಸುಪ್ರೀಂ

ಮುಝಪ್ಫರ್‌ಪುರ ಆಶ್ರಯಧಾಮ ಲೈಂಗಿಕ ಹಗರಣದ ಬಳಿಕ ಅಧಿಕಾರದಿಂದ ಕೆಳಗಿಳಿದ ಮಾಜಿ ರಾಜ್ಯ ಸಚಿವೆ ಮಂಜು ವರ್ಮಾ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಬಿಹಾರ್ ಪೊಲೀಸರನ್ನು ಪ್ರಶ್ನಿಸಿದೆ. ಮಂಜು ವರ್ಮಾ ಅವರ ನಿವಾಸದಲ್ಲಿ ಸ್ಫೋಟಗಳು ಪತ್ತೆಯಾಗಿದ್ದರೂ ಪೊಲೀಸರು ಅವರನ್ನು ಬಂಧಿಸಿರಲಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವೆಯ ಪತಿ ಚಂದ್ರಶೇಖರ್ ವರ್ಮಾ ಬೇಗುಸರಾಯ್‌ಯಲ್ಲಿರುವ ನ್ಯಾಯಾಲಯದ ಮಂದೆ ಸೋಮವಾರ ಶರಣಾಗತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News