ರಾಮ್‌ಕುಮಾರ್‌ಮುಕುಂದ್‌ಗೆ ಗೆಲುವು

Update: 2018-10-30 18:24 GMT

ಬೀಜಿಂಗ್ , ಅ.30: ಚೀನಾದ ಶೆಂಝೆನ್‌ನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಭಾರತದ ಮೂರನೇ ಶ್ರೇಯಾಂಕದ ರಾಮ್ ಕುಮಾರ್ ರಾಮನಾಥನ್ ಮತ್ತು ಸಸಿ ಕುಮಾರ್ ಮುಕುಂದ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ತಲುಪಿದರು..

ಇದೇ ವೇಳೆ ಅತ್ಯುತ್ತಮ ಫಾರ್ಮ್ ನಲ್ಲಿದ್ದ ಪ್ರಜ್ಞೇಶ್ ಗುಣೇಶ್ವರನ್ ಪ್ರಥಮ ಸುತ್ತಿನಲ್ಲಿ ಸೋಲು ಅನುಭವಿಸಿದರು.

    ನಾಲ್ಕನೇ ಶ್ರೇಯಾಂಕದ ಪ್ರಜ್ಞೇಶ್ ಸ್ಪೇನ್‌ನ ಅಲ್ಜೇಂದ್ರೊ ದಾವಿಡೊವಿಕ್ ಫೊಕಿನಾ ವಿರುದ್ಧ 3-6, 4-6 ಅಂತರದಲ್ಲಿ ಆಘಾತ ಅನುಭವಿಸಿ ಕೂಟದಿಂದ ಹೊರ ನಡೆದರು.

  ಸಸಿ ಕುಮಾರ್ ಮುಕುಂದ್ ಅವರು ಚೀನಾದ ಚತುರ ಬಾಲಕ ಯಿಬಿಂಗ್ ವ್ಯೆ ವಿರುದ್ಧ 7-6(4), 6-2 ಅಂತರದಲ್ಲಿ ಜಯ ಗಳಿಸಿ ಎರಡನೇ ಸುತ್ತು ತಲುಪಿದರು.

ವ್ಯೆ ಕಳೆದ ವರ್ಷ ಜೂನಿಯರ್ ಯುಎಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಗ್ರಾನ್‌ಸ್ಲಾಮ್ ಗೆಲುವಿನೊಂದಿಗೆ ಜೂನಿಯರ್ ವರ್ಲ್ಡ್ ನಂ. 1 ಸ್ಥಾನಕ್ಕೇರಿದ್ದರು.

ಸಸಿ ಮುಂದಿನ ಪಂದ್ಯದಲ್ಲಿ ಕೆನಡಾದ 8ನೇ ಶ್ರೇಯಾಂಕದ ಫಿಲಿಪ್ ಪೆಲಿವೊರನ್ನು ಎದುರಿಸುವರು.

ರಾಮ್‌ಕುಮರ್ ರಾಮನಾಥನ್ ಅವರು ತಮ್ಮದೇ ದೇಶದ ಸುಮಿತ್ ನಾಗಲ್ ವಿರುದ್ಧ 3-6, 6-4,7-6(2) ಅಂತರದಲ್ಲಿ ಜಯ ಗಳಿಸಿದರು. ರಾಮ್‌ಕುಮಾರ್ ಮುಂದಿನ ಪಂದ್ಯದಲ್ಲಿ ಈಜಿಪ್ಟ್‌ನ ಮುಹಮ್ಮದ್ ಸಫ್ವಾತ್ ಸವಾಲನ್ನು ಎದುರಿಸಲಿದ್ದಾರೆ.

 ಸಾಕೇತ್ ಮೈನೇನಿ ಗಾಯದ ಕಾರಣದಿಂದಾಗಿ ಫ್ರಾನ್ಸ್‌ನ ಜೋಹಾನ್ ಟಾಟ್ಲೋಟ್ ವಿರುದ್ಧ ಪ್ರಥಮ ಸುತ್ತಿನಲ್ಲಿ ಆಡುವುದರಿಂದ ಹಿಂದೆ ಸರಿದರು.

ಅರ್ಜುನ್ ಖಾಡೆ ಮತ್ತು ಅವರ ಥಾಯ್ಲೆಂಡ್‌ನ ಜೊತೆಗಾರ ಸಾಂಚಾಯ್ ರಾಟಿವಾಟನಾ ಪುರುಷರ ಡಬಲ್ಸ್‌ನಲ್ಲಿ ಮಿಖೈಲ್ ಎಲ್ಗಿನ್ ಮತ್ತು ಯರಾಸ್ಲಾವ್ ಶೈಲಾ ವಿರುದ್ಧ 6-3, 6-4 ಅಂತರದಲ್ಲಿ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News