107ನೇ ಹರೆಯಕ್ಕೆ ಕಾಲಿಟ್ಟ ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟರ್ ಐಲೀನ್ ಆ್ಯಶ್

Update: 2018-10-30 18:27 GMT

ಲಂಡನ್, ಅ.30: ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಐಲೀನ್ ಆ್ಯಶ್ ಮಂಗಳವಾರ 107ನೇ ವಯಸ್ಸಿಗೆ ಕಾಲಿಟ್ಟರು. 1911ರಲ್ಲಿ ಅ.30 ರಂದು ಜನಿಸಿರುವ ಆ್ಯಶ್ 1937ರಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ಪರ ನಾಥಾಂಪ್ಟನ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದರು. 1949ರಲ್ಲಿ ನ್ಯೂಝಿಲೆಂಡ್ ಮಹಿಳಾ ತಂಡದ ವಿರುದ್ಧ ಕೊನೆಯ ಪಂದ್ಯ ಆಡಿದ್ದರು.

12 ವರ್ಷಗಳ ವೃತ್ತಿಜೀವನದಲ್ಲಿ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 23ರ ಸರಾಸರಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆದಿರುವ ಆ್ಯಶ್ ಕೇವಲ 38 ರನ್ ಗಳಿಸಿದ್ದಾರೆ. ಯೋಗವನ್ನು ಇಷ್ಟಪಡುವ ಆ್ಯಶ್ 30 ವರ್ಷಗಳಿಂದ ಯೋಗಾಭ್ಯಾಸ ನಡೆಸುತ್ತಿದ್ದಾರೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹೀಥರ್ ನೈಟ್ ಅವರೊಂದಿಗೆ ಆ್ಯಶ್ ಯೋಗ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಐಸಿಸಿ ವಿಶ್ವದ ಹಿರಿಯ ಅಂತರ್‌ರಾಷ್ಟ್ರೀಯ ಕ್ರಿಕೆಟರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News