ಮಾದಕ ವ್ಯಸನಿಗಳನ್ನು ಪರಿವರ್ತನೆ ಮಾಡಬೇಕಾಗಿರುವುದು ಸಮಾಜದ ಜವಾಬ್ದಾರಿ: ಇಲ್ಯಾಸ್ ತುಂಬೆ

Update: 2018-10-31 06:39 GMT

ಫರಂಗಿಪೇಟೆ, ಅ. 30: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 'ಜನಾರೋಗ್ಯವೇ ರಾಷ್ಟ್ರ ಶಕ್ತಿ' ಶಿರ್ಷಿಕೆಯಡಿ ರಾಷ್ಟ್ರೀಯ ಆರೋಗ್ಯ ಜಾಗೃತಿ ಅಭಿಯಾನದಂಗವಾಗಿ ಫರಂಗಿಪೇಟೆಯಲ್ಲಿ ಮಾದಕ ವ್ಯಸನದ ದುಷ್ಪರಿಣಾಮದ ಜಾಗೃತಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ  ಮೋಜಿಗಾಗಿ ಆರಂಭವಾಗುವ ಮಾದಕ ವ್ಯಸನದ ಚಟಕ್ಕೆ ವಿದ್ಯಾರ್ಥಿಗಳ, ಯುವಕರ, ಭವಿಷ್ಯವೂ ಹಾಳಾಗುತ್ತಿದೆ. ಮಾದಕ ವ್ಯಸನಿಗಳನ್ನು ಸಮಾಜದಿಂದ ಬೇರ್ಪಡಿಸದೇ ಅವರ ಪರಿವರ್ತನೆ ಮಾಡಲು ಪ್ರಯತ್ನಿ ಸಬೇಕಾಗಿರುವುದು ಸಮಾಜದ ಜವಾಬ್ದಾರಿಯಾಗಿರುತ್ತದೆ. ಸಮಾಜಿಕ ಪಿಡುಗು, ಗಾಂಜಾ, ಅಫೀಮು, ಡ್ರಗ್ಸ್ ಮುಂತಾದ ಮತ್ತು ಭರಿಸುವ ಸಾಧನಗಳ ಹಿಂದೆ ಇರುವ ಜಾಲವನ್ನು ಪೊಲೀಸ್ ಇಲಾಖೆ ಪ್ರಮಾಣಿಕವಾಗಿ ತನಿಖೆ ನಡೆಸಿ ಅದನ್ನು ಸಂಪೂರ್ಣ ಸ್ಥಗಿತ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಪಿ.ಎಫ್.ಐ ಫರಂಗಿಪೇಟೆ ವಲಯಾಧ್ಯಕ್ಷ ನಿಸಾರ್ ವಳವೂರು ವಹಿಸಿದ್ದರು, ಪಿ.ಎಪ್.ಐ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಸಲೀಮ್ ಕೆ, ಎನ್.ಸಿ.ಎಚ್.ಆರ್.ಒ ರಾಜ್ಯ ಉಪಾಧ್ಯಕ್ಷ ಮುಹಮ್ಮದ್, ಫರಂಗಿಪೇಟೆ  ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಪಿ.ಎಫ್.ಐ ಫರಂಗಿಪೇಟೆ ಏರಿಯಾ ಅಧ್ಯಕ್ಷ ನಝೀರ್ ಹತ್ತನೇ ಮೈಲ್ ಕಲ್ಲು ಈ ಸಂದರ್ಭ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯೋಗ ಪ್ರಾತ್ಯಕ್ಷಿಕೆಯನ್ನು ಇಸ್ಮಾಯಿಲ್ ನಡೆಸಿಕೊಟ್ಟರು ಮತ್ತು ಪಿ.ಎಫ್.ಐ. ಸದಸ್ಯರ ತಾಲೀಮು, ಆತ್ಮ ಸಂರಕ್ಷಣಾ ಕಲೆ ಹಾಗೂ ಮಾದಕ ವ್ಯಸನದ ಕಿರು ಚಿತ್ರ ಪ್ರದರ್ಶಿಸಲಾಯಿತು. ಶರೀಫ್ ಸ್ವಾಗತಿಸಿ, ಕಾದರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ವಳಚ್ಚಿಲ್ ಪದವು, ಅಮೆಮಾರ್, ಮಾರಿಪ್ಪಳ್ಳ, ತುಂಬೆಯಲ್ಲಿ ಮಾದಕ ವ್ಯಸನದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News