ಅಮೆರಿಕದಲ್ಲಿ ಈ ತಪ್ಪಿಗೆ ಭಾರತೀಯನಿಗೆ 63 ಕೋಟಿ ರೂ. ದಂಡ

Update: 2018-10-31 14:31 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಅ. 31: ಅಮೆರಿಕದ ಪ್ರಮುಖ ವಿಶ್ವವಿದ್ಯಾನಿಲಯವೊಂದರ ಕಂಪ್ಯೂಟರ್ ಜಾಲದ ಮೇಲೆ ಸೈಬರ್ ದಾಳಿಗಳನ್ನು ನಡೆಸಿರುವುದಕ್ಕಾಗಿ, ಭಾರತ ಮೂಲದ ವ್ಯಕ್ತಿಯೊಬ್ಬ 8.6 ಮಿಲಿಯ ಡಾಲರ್ (ಸುಮಾರು 63 ಕೋಟಿ ರೂಪಾಯಿ) ಪರಿಹಾರ ನೀಡಬೇಕು ಎಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಮೈಕಲ್ ಶಿಪ್ ಆದೇಶ ನೀಡಿದ್ದಾರೆ.

ಅದೇ ವೇಳೆ, 6 ತಿಂಗಳ ಗೃಹ ಸೆರೆಮನೆವಾಸ ಶಿಕ್ಷೆಯನ್ನೂ ನ್ಯಾಯಾಧೀಶರು ವಿಧಿಸಿದ್ದಾರೆ.

ಕಂಪ್ಯೂಟರ್ ವಂಚನೆ ಮತ್ತು ದುರುಪಯೋಗ ಕಾಯ್ದೆಯನ್ನು ಉಲ್ಲಂಘಿಸಿರುವುದನ್ನು ಆರೋಪಿ 22 ವರ್ಷದ ಪರಸ್ ಝಾ ಇದಕ್ಕೂ ಮೊದಲು ಒಪ್ಪಿಕೊಂಡಿದ್ದನು. ‘ಕ್ಲಿಕ್ ಫ್ರಾಡ್ ಬಾಟ್‌ನೆಟ್’ಗಳನ್ನು ಸೃಷ್ಟಿಸಿರುವುದನ್ನೂ ಅವನು ಒಪ್ಪಿಕೊಂಡಿದ್ದನು. ಈ ಬಾಟ್‌ನೆಟ್‌ಗಳು ಲಕ್ಷಾಂತರ ಕಂಪ್ಯೂಟರ್ ಉಪಕರಣಗಳಿಗೆ ಹಾನಿಕಾರಕ ಸಾಫ್ಟ್‌ವೇರ್ ಕಳುಹಿಸಿತ್ತು.

ಟ್ರೆಂಟನ್ ಫೆಡರಲ್ ನ್ಯಾಯಾಲಯದಲ್ಲಿ ಕಳೆದ ವಾರ ತೀರ್ಪು ನೀಡಿದ ನ್ಯಾಯಾಧೀಶರು, ಗೃಹ ಬಂಧನದಿಂದ ಬಿಡುಗಡೆಯಾದ ಮೇಲೆ ಐದು ವರ್ಷಗಳ ಕಾಲ ಅಪರಾಧಿಯ ಮೇಲೆ ನಿಗಾ ಇಡುವಂತೆ ಆದೇಶಿಸಿದ್ದಾರೆ.

2,500 ಗಂಟೆಗಳ ಸಮುದಾಯ ಸೇವೆ ಮಾಡುವಂತೆಯೂ ನ್ಯಾಯಾಧೀಶರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News