×
Ad

ಜೈಲಿನ ಹೊರಗೆ ಆತ್ಮಹತ್ಯಾ ದಾಳಿ: 6 ಸಾವು

Update: 2018-10-31 20:05 IST

ಕಾಬೂಲ್, ಅ. 31: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಜೈಲಿನ ಉದ್ಯೋಗಿಗಳನ್ನು ಸಾಗಿಸುತ್ತಿದ್ದ ವಾಹನವೊಂದರ ಮೇಲೆ ಆತ್ಮಹತ್ಯಾ ಬಾಂಬರ್ ಒಬ್ಬ ಬುಧವಾರ ನಡೆಸಿದ ದಾಳಿಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಹಾಗೂ 8 ಮಂದಿ ಗಾಯಗೊಂಡಿದ್ದಾರೆ.

ಪುಲೆ-ಚರ್ಖಿ ಜೈಲಿಗೆ ಸೇರಿದ ವಾಹನವು ಬೆಳಗ್ಗೆ ಸುಮಾರು 7:30ಕ್ಕೆ ಜೈಲಿನ ದ್ವಾರಕ್ಕೆ ಬಂದಾಗ ದಾಳಿ ನಡೆಯಿತು ಎಂದು ಕಾಬೂಲ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ದಾಳಿಯಲ್ಲಿ ಮೂವರು ಭದ್ರತಾ ಪಡೆ ಸದಸ್ಯರು ಹಾಗೂ ಮೂವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News