ದೇವನಿಂದನೆ: ಮರಣ ದಂಡನೆಗೆ ಒಳಗಾಗಿದ್ದ ಮಹಿಳೆಯ ಖುಲಾಸೆ

Update: 2018-10-31 14:49 GMT

ಇಸ್ಲಾಮಾಬಾದ್, ಅ. 31: ದೇವನಿಂದನೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕ್ರೈಸ್ತ ಮಹಿಳೆ ಅಸಿಯಾ ಬೀಬಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.

‘‘ಮೇಲ್ಮನವಿಯನ್ನು ಸ್ವೀಕರಿಸಲಾಗಿದೆ. ಅವರನ್ನು ಖುಲಾಸೆಗೊಳಿಸಲಾಗಿದೆ. ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ತೀರ್ಪುಗಳನ್ನು ಹಿಂದಕ್ಕೆ ಪಡೆಯಲಾಗಿದೆ’’ ಎಂದು ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ ಸಾಕಿಬ್ ನಿಸಾರ್ ತೀರ್ಪಿನಲ್ಲಿ ತಿಳಿಸಿದರು.

ಈ ಪ್ರಕರಣವು ಅಂತಾರಾಷ್ಟ್ರೀಯ ಮಾನವಹಕ್ಕು ಗುಂಪುಗಳ ಗಮನವನ್ನು ಸೆಳೆದಿತ್ತು ಹಾಗೂ ದೇಶದ ಮಹತ್ವದ ಪ್ರಕರಣವಾಗಿ ಮಾರ್ಪಟ್ಟಿತ್ತು.

ಅಸಿಯಾ ಬೀಬಿಯನ್ನು ಬಿಡುಗಡೆ ಮಾಡುವಂತೆ 16ನೇ ಪೋಪ್ ಬೆನೆಡಿಕ್ಟ್ 2010ರಲ್ಲಿ ಮನವಿ ಮಾಡಿದ್ದರು. 2015ರಲ್ಲಿ ಅವರ ಪುತ್ರಿ ಕ್ಯಾಥೊಲಿಕ್ ಚರ್ಚ್‌ನ ಹಾಲಿ ಮುಖ್ಯಸ್ಥ ಪೋಪ್ ಫ್ರಾನ್ಸಿಸ್‌ರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News