×
Ad

ಶಾಲಾ ಪ್ರಾಂಶುಪಾಲನಿಗೆ 105 ವರ್ಷ ಜೈಲು!

Update: 2018-10-31 20:27 IST

ಪೇಶಾವರ, ಅ. 31: ಶಾಲಾ ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಪಡಿಸಿದ ಹಾಗೂ ಶಾಲಾ ಆವರಣದಲ್ಲಿ ಅಳವಡಿಸಲಾದ ಗುಪ್ತ ಕ್ಯಾಮರಗಳ ಮೂಲಕ ಅವರ ಚಿತ್ರಗಳನ್ನು ತೆಗೆದ ಆರೋಪದಲ್ಲಿ ಪಾಕಿಸ್ತಾನದ ಪೇಶಾವರದ ನ್ಯಾಯಾಲಯವೊಂದು ಖಾಸಗಿ ಶಾಲೆಯೊಂದರ ಪ್ರಾಂಶುಪಾಲನಿಗೆ 105 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ವಿದ್ಯಾರ್ಥಿಯೊಬ್ಬ 2017 ಜುಲೈ 14ರಂದು ದೂರು ದಾಖಲಿಸಿದ ಬಳಿಕ ಪ್ರಾಂಶುಪಾಲ ಅತಾವುಲ್ಲಾ ಮರ್ವತ್‌ನನ್ನು ಬಂಧಿಸಲಾಗಿತ್ತು.

ಅವನ ವಿರುದ್ಧ ಮಕ್ಕಳ ಶೋಷಣೆ, ನೀಲಿಚಿತ್ರ ತಯಾರಿಕೆ, ಅತ್ಯಾಚಾರ, ಬ್ಲಾಕ್‌ಮೇಲ್ ಮತ್ತು ಅಕ್ರಮ ಸಂಬಂಧಗಳನ್ನು ಹೊಂದಿದ ಆರೋಪಗಳನ್ನು ಹೊರಿಸಲಾಗಿತ್ತು.

ಪೇಶಾವರದ ಸೆಶನ್ಸ್ ನ್ಯಾಯಾಲಯವೊಂದು ಅವನಿಗೆ ಒಟ್ಟು 105 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅವನಿಗೆ 14 ಲಕ್ಷ ರೂಪಾಯಿ (ಸುಮಾರು 7.75 ಲಕ್ಷ ಭಾರತೀಯ ರೂಪಾಯಿ) ದಂಡವನ್ನೂ ವಿಧಿಸಿದೆ.

ಅವನು 18 ವರ್ಷಕ್ಕಿಂತ ಕೆಳಗಿನ ಬಾಲಕಿಯರನ್ನು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News