×
Ad

ವಲಸಿಗರ ಮಕ್ಕಳು ಪೌರತ್ವ ಪಡೆಯುವ ಸಾಂವಿಧಾನಿಕ ಹಕ್ಕು ಹಿಂದಕ್ಕೆ: ಟ್ರಂಪ್

Update: 2018-10-31 20:30 IST

ವಾಶಿಂಗ್ಟನ್, ಅ. 31: ಅಮೆರಿಕದಲ್ಲಿ ಜನಿಸುವ, ಪೌರರಲ್ಲದವರ ಹಾಗೂ ಅನಧಿಕೃತ ವಲಸಿಗರ ಮಕ್ಕಳು ಸ್ವಾಭಾವಿಕವಾಗಿ ಪೌರತ್ವ ಪಡೆಯುವ ಸಾಂವಿಧಾನಿಕ ಹಕ್ಕನ್ನು ಹಿಂದೆಗೆಯಲು ತಾನು ಬಯಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮಧ್ಯಂತರ ಚುನಾವಣೆಯ ಮುನ್ನ ಕಠಿಣ ವಲಸೆ ನೀತಿಗಳನ್ನು ತರಲು ಪ್ರಯತ್ನಗಳು ಸಾಗಿರುವಂತೆಯೇ, ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ವಲಸೆ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ತನ್ನ ಬೆಂಬಲಿಗರು ಪುಳಕಿತರಾಗುತ್ತಾರೆ ಹಾಗೂ ಸಂಸತ್ತು ಕಾಂಗ್ರೆಸ್‌ನಲ್ಲಿ ನಿಯಂತ್ರಣ ಸಾಧಿಸಲು ರಿಪಬ್ಲಿಕನ್ನರಿಗೆ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವನ್ನು ಟ್ರಂಪ್ ಹೊಂದಿದ್ದಾರೆ.

ಹುಟ್ಟಿನಿಂದ ಪೌರತ್ವ ಪಡೆಯುವ ಹಕ್ಕನ್ನು ರದ್ದುಗೊಳಿಸುವುದು, ಇನ್ನೊಂದು ಸುತ್ತಿನ ಕಾನೂನು ಸಮರಕ್ಕೆ ಹಾದಿ ಮಾಡಿಕೊಡಲಿದೆ. ಸಂವಿಧಾನಕ್ಕೆ ಮಾಡಲಾದ ತಿದ್ದುಪಡಿಯನ್ನು ಬದಲಿಸುವ ಅಧ್ಯಕ್ಷರ ಏಕಪಕ್ಷೀಯ ಅಧಿಕಾರವನ್ನು ಅದು ಪ್ರಶ್ನಿಸಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, ‘‘ಒಂದು ಕಾರ್ಯಕಾರಿ ಆದೇಶದ ಮೂಲಕ ಇದನ್ನು ಮಾಡಬಹುದು ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’’ ಎಂದರು.

ನನ್ನ ಪ್ರಸ್ತಾಪವನ್ನು ಶ್ವೇತಭವನದ ವಕೀಲರು ಪರಿಶೀಲಿಸುತ್ತಿದ್ದಾರೆ ಎಂದು ಟ್ರಂಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News