ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ತನ್ನಿ: ಆರೆಸ್ಸೆಸ್

Update: 2018-10-31 15:59 GMT

ಹೊಸದಿಲ್ಲಿ,ಅ.31: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಸುಗ್ರೀವಾಜ್ಞೆ ಹೊರಡಿಸಬೇಕು ಅಥವಾ ಸೂಕ್ತ ಕಾನೂನು ತರಬೇಕು ಎಂಬ ತನ್ನ ಹೇಳಿಕೆಯನ್ನು ಆರೆಸ್ಸೆಸ್ ಬುಧವಾರ ಪುನರುಚ್ಚರಿಸಿದೆ. ರಾಮ ಮಂದಿರ ನಿರ್ಮಾಣ ದೇಶದ ಹೆಮ್ಮೆಯ ಪ್ರಶ್ನೆಯಾಗಿದೆ ಎಂದು ತಿಳಿಸಿದ ಆರೆಸ್ಸೆಸ್ನ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ, ಆಯೋಧ್ಯೆ ವಿವಾದವು ಇನ್ನೂ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಿಲ್ಲ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉದ್ಘಾಟಿಸಿದ ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಲದ ಹಿನ್ನೆಲೆಯಲ್ಲಿ ವೈದ್ಯ ಈ ಮಾತುಗಳನ್ನು ಆಡಿದ್ದಾರೆ. ಅಕ್ಟೋಬರ್ 18ರಂದು ನಾಗಪುರದಲ್ಲಿ ವಾರ್ಷಿಕ ದಸರಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಭಾಗವತ್ ಮೊದಲ ಬಾರಿ ಈ ಆಗ್ರಹವನ್ನು ಮಾಡಿದ್ದರು. ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಕೂಡಾ ಇಂಥದ್ದೇ ಬೇಡಿಕೆ ಇಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News