ಎಫ್‌ಟಿಐಐ ಅಧ್ಯಕ್ಷ ಸ್ಥಾನಕ್ಕೆ ಅನುಪಮ್ ಖೇರ್ ರಾಜೀನಾಮೆ

Update: 2018-10-31 17:02 GMT

ಮುಂಬೈ, ಅ. 31: ಬಾಲಿವುಡ್ ನಟ ಅನುಪಮ್ ಖೇರ್ ಬ್ಯುಸಿ ಶೆಡ್ಯೂಲ್‌ನ ಕಾರಣ ಉಲ್ಲೇಖಿಸಿ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಮಾಹಿತಿ ಹಾಗೂ ಸಂವಹನ ಸಚಿವಾಲಯಕ್ಕೆ ನೀಡಿದ ರಾಜೀನಾಮೆ ಪತ್ರದಲ್ಲಿ ಖೇರ್, ಅಂತಾರಾಷ್ಟ್ರೀಯ ಟೆಲಿವಿಷನ್ ಶೋ ಹಿನ್ನೆಲೆಯಲ್ಲಿ ತಾನು ಅಮೆರಿಕದಲ್ಲಿ ನೆಲೆಸಬೇಕಾಗುತ್ತದೆ. ಆದುದರಿಂದ ಎಫ್‌ಟಿಐಐ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. 2017 ಅಕ್ಟೋಬರ್ 11ರಂದು ಖೇರ್ ಅವರನ್ನು ಎಫ್‌ಟಿಐಐಗೆ ನಿಯೋಜಿಸಲಾಗಿತ್ತು. ಗಜೇಂದ್ರ ಚೌಹಾನ್ ಅವರ ಸ್ಥಾನಕ್ಕೆ ಖೇರ್ ಅವರನ್ನು ನೇಮಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಕುರಿತು ರಾಜಕೀಯ ಚಿತ್ರ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ನ ಶೂಟಿಂಗ್ ಅನ್ನು ಖೇರ್ ಅವರು ಇತ್ತೀಚೆಗೆ ಪೂರ್ಣಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News