ಪಟೇಲರು ಇರುತ್ತಿದ್ದರೆ ಪ್ರತಿಮೆ ಅನಾವರಣ ಬೇಡ ಎನ್ನುತ್ತಿದ್ದರು: ಸರ್ದಾರ್ ಮರಿಸೋದರಳಿಯ

Update: 2018-11-01 15:33 GMT

ವಡೋದರ,ನ.1: ಸರ್ದಾರ್ ಪಟೇಲರ 182 ಮೀ. ಎತ್ತರದ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಮಾತನಾಡಿರುವ ಪಟೇಲರ ಮರಿಸೋದರಳಿಯ ಧೀರೂಬಾಯಿ ಪಟೇಲ್, ಇಂಥ ಒಂದು ಸ್ಮಾರಕವನ್ನು ಹಿಂದೆಯೇ ನಿರ್ಮಿಸಬೇಕಿತ್ತು. ಆದರೆ ಪಟೇಲರು ಮಾತ್ರ ಈ ರೀತಿಯ ಕಾಣಿಕೆಯನ್ನು ನಿರಾಕರಿಸುತ್ತಿದ್ದರು ಎಂದು ತಿಳಿಸಿದ್ದಾರೆ.

“ನಿಮ್ಮ ಹೆಸರಿನಲ್ಲಿ ಪ್ರತಿಮೆಯನ್ನು ನಿರ್ಮಿಸಬೇಕೇ ಎಂದು ನಾವು ಪಟೇಲರಲ್ಲಿ ಕೇಳಿದ್ದರೆ ಅವರು ಬೇಡ ಎಂದು ಹೇಳುತ್ತಿದ್ದರು. ಅವರು ಬಹಳ ಸರಳ ಹಿನ್ನೆಲೆಯಲ್ಲಿ ಬೆಳೆದು ಬಂದವರು. ಅವರಿಗೆ ಹಣದ ಬೆಲೆ ತಿಳಿದಿತ್ತು” ಎಂದು 91ರ ಹರೆಯದ ಧೀರೂಬಾಯಿ ತಿಳಿಸಿದ್ದಾರೆ. ಬುಧವಾರ ನಡೆದ ಪಟೇಲರ ಪ್ರತಿಮೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರ ಜೊತೆಗೆ ಪಟೇಲರ ಕುಟುಂಬದ 36 ಸದಸ್ಯರು ಭಾಗವಹಿಸಿದ್ದರು.

ಕೊನೆಗೂ ಅವರಿಗೆ ಸಲ್ಲಬೇಕಾಗಿರುವುದು ಸಂದಿದೆ. ಅವರು ದೃಷ್ಟಿಕೋನ ಮತ್ತು ಬದ್ಧತೆಯುಳ್ಳ ವ್ಯಕ್ತಿಯಾಗಿದ್ದರು. ಅವರು ಪ್ರತಿದಿನ ಕರಮ್ಸದ್‌ನಿಂದ ನಡಿಯಾಡ್‌ಗೆ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದರು. ಪಟೇಲರು ಇನ್ನು ಸ್ವಲ್ಪ ಸಮಯ ಸುಭಾಷ್ ಚಂದ್ರ ಭೋಸ್ ಅವರ ಜೊತೆ ಕಳೆಯುತ್ತಿದ್ದರೆ ಅವರು ಇನ್ನಷ್ಟು ಎತ್ತರವನ್ನು ಏರುತ್ತಿದ್ದರು ಎಂದು ಧೀರೂಬಾಯಿ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News