×
Ad

ದೇಣಿಗೆ ಸ್ಥಗಿತ: ದಯಾಮರಣ ಕೋರಿದ ಪುರಿ ಜಗನ್ನಾಥ ದೇಗುಲದ ಅರ್ಚಕ

Update: 2018-11-01 21:29 IST

ಭುವನೇಶ್ವರ, ನ. 1: ಪರಿಚಾರಕರ ಆನುವಂಶಿಕ ಹಕ್ಕು ಹಾಗೂ ಭಕ್ತರು ದೇಣಿಗೆ ನೀಡುವಂತೆ ಒತ್ತಾಯಿಸುವುದನ್ನು ರದ್ದುಗೊಳಿಸುವ ಸಲಹೆಯನ್ನು ಸುಪ್ರೀಂ ಕೋರ್ಟ್ ನೀಡಿದ ನಾಲ್ಕು ತಿಂಗಳ ಬಳಿಕ, ಒರಿಸ್ಸಾ ಪುರಿಯ ಜಗನ್ನಾಥ ದೇವಾಲಯದ ಅರ್ಚಕ ಭಾರತದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ದಯಾ ಮರಣಕ್ಕೆ ಅನುಮತಿ ಕೋರಿದ್ದಾರೆ.

ತನಗೆ ಸಿಗುತ್ತಿದ್ದ ಏಕೈಕೆ ಆದಾಯ ದೇವಾಲಯದ ಒಳಗೆ ಭಕ್ತರು ನೀಡುತ್ತಿದ್ದ ಕೊಡುಗೆ ಹಾಗೂ ದೇಣಿಗೆ ಎಂದು ಪರಿಚಾರಕ ನರಂಸಿಂೆ ಪೂಜಾಪಂಡ ಪತ್ರದಲ್ಲಿ ಹೇಳಿದ್ದಾರೆ. ‘‘ನಾವು ಅವರಲ್ಲಿ ಬೇಡುತ್ತಿದ್ದೆವು. ಇದು ಕಳೆದ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ನ್ಯಾಯಾಲಯ ಹಾಗೂ ಸರಕಾರ ನಮ್ಮ ಆದಾಯ ನಿಲ್ಲಿಸಲು ಯತ್ನಿಸುತ್ತಿದೆ. ಆದಾಯ ಇಲ್ಲದೆ ನಾವು ಬದುಕುವುದು ಹೇಗೆ?’’ ಎಂದು ಬುಧವಾರ ರವಾನಿಸಿದ ಮನವಿಯಲ್ಲಿ ಅವರು ಹೇಳಿದ್ದಾರೆ.

‘‘ಭಕ್ತರಿಂದ ದೇಣಿಗೆ ಸ್ವೀಕರಿಸುವುದನ್ನು ನಿಲ್ಲಿಸುವಂತೆ ದೇವಾಲಯದ ಪರಿಚಾರಿಕರಿಗೆ ಸುಪ್ರೀಕೋರ್ಟ್ ಸೂಚಿಸಿದೆ. ಅದಿಲ್ಲದೆ ಬದುಕುವುದು ಸಾಧ್ಯವಿಲ್ಲ. ಆದುದರಿಂದ ನಾನು ಒರಿಸ್ಸಾ ಸರಕಾರವನ್ನು ದಯಾಮರಣಕ್ಕೆ ಕೋರಿದ್ದೆ. ಆದರೆ, ಒರಿಸ್ಸಾ ಸರಕಾರ ನಿರಾಕರಿಸಿತು. ಹಸಿವಿನಿಂದ ನರಳಿ ಸಾಯುವುದಕ್ಕಿಂತ ಒಂದೇ ಬಾರಿ ಸಾಯುವುದು ಉತ್ತಮ’’ ಎಂದು ಪೂಜಾಪಂಡ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News