×
Ad

ದಾಂತೆವಾಡದಲ್ಲಿ ಮಾಧ್ಯಮದ ಮೇಲೆ ದಾಳಿ ಉದ್ದೇಶ ಪೂರ್ವಕವಾಗಿರಲಿಲ್ಲ: ಮಾವೋವಾದಿ ಹೇಳಿಕೆ

Update: 2018-11-02 22:10 IST

ಹೊಸದಿಲ್ಲಿ, ನ. 1: ಛತ್ತೀಸ್‌ಗಡ ದಾಂತೆವಾಡ ಜಿಲ್ಲೆಯಲ್ಲಿ ದೂರದರ್ಶನದ ಕ್ಯಾಮರಾಮ್ಯಾನ್ ಹಾಗೂ ಇಬ್ಬರು ಪೊಲೀಸರ ಹತ್ಯೆ ನಡೆದ ಮೂರು ದಿನಗಳ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಮಾವೋವಾದಿಗಳು, ಮಾಧ್ಯಮ ಹಾಗೂ ಪೊಲೀಸರನ್ನು ಗುರಿಯಾಗಿಸುವ ಉದ್ದೇಶವನ್ನು ನಾವು ಹೊಂದಿರಲಿಲ್ಲ ಎಂದಿದ್ದಾರೆ.

ಬಸ್ತಾರ್‌ನಲ್ಲಿ ಚುನಾವಣೆ ವರದಿ ಮಾಡಿದ ಹಾಗೂ ಸುಮೇಲಿ ಕ್ಯಾಂಪ್ ಸಮೀಪದ ನೀಲವಾಯದಲ್ಲಿರುವ ನೂತನ ಮತಗಟ್ಟೆಯತ್ತ ವರದಿಗೆ ತೆರಳುತ್ತಿದ್ದ ದೂರದರ್ಶನದ ಮೂವರು ಸದಸ್ಯರ ತಂಡದ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದರು. ಹೊಂಚು ದಾಳಿಯ ಬಳಿಕ ಡಿಡಿ ಕೆಮರಾಮ್ಯಾನ್ ಅಚ್ಚುತಾನಂದ ಸಾಹು ಮೃತಪಟ್ಟಿದ್ದರು. ಆದರೆ, ಮಾಧ್ಯಮವನ್ನು ಗುರಿಯಾಗಿರಿಸುವ ಉದ್ದೇಶವನ್ನು ನಾವು ಹೊಂದಿರಲಿಲ್ಲ ಎಂದು ಮಾವೋವಾದಿಗಳ ಹೇಳಿಕೆ ತಿಳಿಸಿದೆ. ಮಾವೋವಾದಿಗಳ ಹೇಳಿಕೆ ತಿರಸ್ಕರಿಸಿರುವ ದಾಂತೆವಾಡದ ಎಸ್.ಪಿ. ಅಭಿಶೇಕ್ ಪಲ್ಲವ್, ಹೊಂಚು ದಾಳಿಯ ಕೆಲವು ನಿಮಿಷಗಳಲ್ಲಿ ಏನು ನಡೆದಿದೆ ಎಂಬುದನ್ನು ಕ್ಯಾಮರಾ ದಾಖಲಿಸುತ್ತದೆ. ಆದುದರಿಂದ ಕ್ಯಾಮರಾವನ್ನು ಅಪಹರಿಸಲಾಗಿದೆ. ಅಲ್ಲದೆ ಕ್ಯಾಮರಾಮ್ಯಾನ್‌ನ ದೇಹಕ್ಕೆ ಹಲವು ಬುಲೆಟ್‌ಗಳು ನುಗ್ಗಿವೆ ಹಾಗೂ ಬುರುಡೆಗೆ ಘಾಸಿ ಆಗಿದೆ. ಇದು ಪ್ರಮಾದವಶಾತ್ ಸಂಭವಿಸಿರಲು ಸಾಧ್ಯವಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News