ಶೀಘ್ರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು, ಆದೇಶ ಹಿಂದಿಯಲ್ಲಿ ಲಭ್ಯ

Update: 2018-11-02 18:05 GMT

ಹೊಸದಿಲ್ಲಿ, ನ. 1: ತೀರ್ಪು ಹಾಗೂ ಆದೇಶವನ್ನು ಇಂಗ್ಲಿಷ್‌ನಿಂದ ಹಿಂದಿಗೆ, ಸ್ವಲ್ಪ ಸಮಯದ ಬಳಿಕ ಇತರ ಭಾಷೆಗಳಿಗೆ ಭಾಷಾಂತರಿಸಲು ಸುಪ್ರೀಂ ಕೋರ್ಟ್ ಚಿಂತಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ತಿಳಿಸಿದ್ದಾರೆ. ವಿವಿಧ ತೀರ್ಪುಗಳ ಕಾನೂನು ಅಂಶದ ಅಡಕ, ಭಾರತದ ಮುಖ್ಯ ನ್ಯಾಯಮೂರ್ತಿ ಗುರುವಾರ ಅನಾವರಣಗೊಳಿಸಿದ ಚಿಂತಕರ ಚಾವಡಿ, ನ್ಯಾಯಾಲಯದ ವಿಚಾರಣೆಯ ನೇರ ಪ್ರಸಾರ, ಗುಜರಾತ್ ಉಚ್ಚ ನ್ಯಾಯಾಲಯದ ವಿವಾದ, ಸುಪ್ರೀಂ ಕೋರ್ಟ್ ಕಲಾಪದ ವರದಿ ಮಾಡುವ ಸಂದರ್ಬ ಪತ್ರಕರ್ತರು ಎದುರಿಸುವ ಸಂಕಷ್ಟ ಮೊದಲಾದ ವಿಚಾರಗಳ ಕುರಿತ ಮುಖ್ಯ ನ್ಯಾಯಮೂರ್ತಿ ಮಾತನಾಡಿದರು. ತೀರ್ಪಿನ ಕಾನೂನು ಅಂಶದ ಅಡಕ ಟಿಪ್ಪಣಿಯನ್ನು ಹೊರ ತರುವ ಚಿಂತನೆಯನ್ನು ಸಂಬಂಧಿತ ನ್ಯಾಯಮೂರ್ತಿಗಳು ಅನುಮತಿ ನೀಡಿದ ಬಳಿಕ ಅಂತಿಮ ಗೊಳಿಸಲಾಗುವುದು ಎಂದು ನ್ಯಾಯಮೂರ್ತಿ ಗೊಗೋಯಿ ಹೇಳಿದ್ದಾರೆ. ಚಿಂತಕರ ಚಾವಡಿ ತೀರ್ಪು ಬರೆಯಲು ವಿಷಯಗಳನ್ನು ನೀಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News