ಬೆಳ್ತಂಗಡಿ: ಮೂರು ಅಂಗಡಿಗಳಿಗೆ ನುಗ್ಗಿ ಸರಣಿ ಕಳವು

Update: 2018-11-03 04:53 GMT

ಬೆಳ್ತಂಗಡಿ, ನ. 3: ಅನಿಲ್ ವೈನ್ಸ್, ಮಂಗಳಾ ಆಗ್ರೋ ಕೇಂದ್ರ, ಬಿ.ಎ. ಟ್ರೇಡರ್ಸ್ ನಿಂದ ಕಳ್ಳತನ ವಾದ ಬಗ್ಗೆ ವರದಿಯಾಗಿದೆ. 

ಲಾಯಿಲದ ಜಂಕ್ಷನಿನಲ್ಲಿರುವ ಬಿ.ಎ.ಟ್ರೇಡರ್ಸ್ ಅಂಗಡಿ, ವೈನ್ಸ್ ಶಾಪಿನಿಂದ ಮದ್ಯ, ಬಿ.ಎ.ಟ್ರೇಡರ್ಸ್ ನಿಂದ ಸಿಗರೇಟ್ ಬಾಕ್ಸ್ ಕಳ್ಳತನವಾದ ಬಗ್ಗೆ ತಿಳಿದುಬಂದಿದೆ. ಮೂರು ಅಂಗಡಿಗಳ ಶಟರ್ ಮುರಿದು ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.

ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ನಾಲ್ಕು ಜನರಿಂದ ಕೃತ್ಯ ನಡೆದಿರುವ ಬಗ್ಗೆ ದೂರಲಾಗಿದೆ. 8 ತಿಂಗಳ ಹಿಂದೆ ಅನಿಲ್ ವೈನ್ಸ್, ಬಿ.ಎ. ಟ್ರೇಡರ್ಸ್ ಅಂಗಡಿಗಳಲ್ಲಿ ಕಳ್ಳತನ ನಡೆದಿತ್ತು. ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲೂ ನಾಲ್ಲು ಅಂಗಡಿಗಳಿಗೆ ನುಗ್ಗಿ ಕಳ್ಳತನವಾದ ಬಗ್ಗೆ ವರದಿಯಾಗಿದೆ. ಮೊಬೈಲ್ ಅಂಗಡಿ, ಮೀನು ಅಂಗಡಿ , ಎರಡು ದಿನಸಿ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News