ಶಿವಮೊಗ್ಗ ಲೋಕಸಭಾ ಉಪ ಚುನಾವಣೆ : ಬೈಂದೂರಿನಲ್ಲಿ ಶೇ. 37.67 ಮತದಾನ

Update: 2018-11-03 09:29 GMT
ಮರವಂತೆಯ ಪಿಂಕ್ ಮತಗಟ್ಟೆ

ಬೈಂದೂರು, ನ. 3: ಶಿವಮೊಗ್ಗ ಲೋಕಸಭಾ ಸ್ಥಾನಕ್ಕಾಗಿ ನಡೆದಿರುವ ಉಪ ಚುನಾವಣೆ ಯಲ್ಲಿ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಅಪರಾಹ್ನ 1  ಗಂಟೆಗೆ ಶೇ. 37.67ರಷ್ಟು ಮತದಾನವಾಗಿದೆ.

ಕ್ಷೇತ್ರದ ಒಟ್ಟು 2.21 ಲಕ್ಷ ಮತದಾರರ‌ಲ್ಲಿ 80,000 ಮಂದಿ ಮತ ಚಲಾಯಿಸಿದ್ದಾರೆ ಎಂದು ಬೈಂದೂರು ತಹಶೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಲೋಕಸಭಾ ಉಪಚುನಾವಣೆ ಗೆ 8 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ  ಮಧ್ಯಾಹ್ನ 1:30 ಗಂಟೆಗೆ ಶೇ. 35 ರಷ್ಟು ಮತದಾನ ನಡೆದಿದೆ.

ಶಿವಮೊಗ್ಗ ನಗರ: 26-55% 

ಶಿವಮೊಗ್ಗ ಗ್ರಾಮಾಂತರ: 38-98%

ತಿರ್ಥಹಳ್ಳಿ: 39-42%

ಸಾಗರ: 34-67%

ಸೊರಬ: 42-81%

ಶಿಕಾರಿಪುರ: 41-38%

ಭದ್ರಾವತಿ: 28-36%

ಬೈಂದೂರು: 37.16% 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News