ಪ್ರಬಲ ವೈಜ್ಞಾನಿಕ ಸಾಕ್ಷದಿಂದ ಶಿಕ್ಷೆಯ ಪ್ರಮಾಣ ವೃದ್ಧಿಸಲು ಸಾಧ್ಯ: ಎಡಿಜಿಪಿ ಸಲೀಂ

Update: 2018-11-03 14:29 GMT

ಮಣಿಪಾಲ, ನ.3: ಸಾಕ್ಷಗಳ ಕೊರತೆಯಿಂದ ಇಂದು ನ್ಯಾಯಾಲಯಗಳಲ್ಲಿ ಶಿಕ್ಷೆಯ ಪ್ರಮಾಣ ಕೇವಲ ಶೇ.30ರಿಂದ 35ರಷ್ಟಿದ್ದು, ಈ ನಿಟ್ಟಿನಲ್ಲಿ ವೈಜ್ಞಾನಿಕ ವಾದ ಪ್ರಬಲ ಸಾಕ್ಷ ಸಂಗ್ರಹ ಹಾಗೂ ವಿಶ್ಲೇಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಅದಕ್ಕಾಗಿ ಎಲ್ಲ ಇಲಾಖೆಗಳು ಕೈಜೋಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಹೇಳಿದ್ದಾರೆ.

ಮಣಿಪಾಲ ಕೆಎಂಸಿಯ ನ್ಯಾಯ ವೈದ್ಯಶಾಸ್ತ್ರ್ತ ವಿಭಾಗ ಹಾಗೂ ಕರ್ನಾಟಕ ನ್ಯಾಯ ವೈದ್ಯಶಾಸ್ತ್ರ ಸಂಘದ ಸಹಭಾಗಿತ್ವದಲ್ಲಿ ಕೆಎಂಸಿಯ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ‘ನ್ಯಾಯ ವೈದ್ಯಶಾಸ್ತ್ರದ ಮುಂದಿರುವ ದಾರಿಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾದ ಮೂರು ದಿನಗಳ ಸಮ್ಮೆಳನ ‘ಕಮಲ್ಸ್‌ಕೊನ್-2018’ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿ ದ್ದರು.

ಕ್ರಿಮಿನಲ್ ಪ್ರಕರಣಗಳಲ್ಲಿ ಫೋರೆನ್ಸಿಕ್ ತಜ್ಞರ ವರದಿಯು ಪೊಲೀಸ್ ತನಿಖೆಗೆ ಬಹಳಷ್ಟು ಸಹಕಾರಿಯಾಗುತ್ತದೆ. ಮತ್ತು ಆರೋಪಿಯನ್ನು ಶೀಘ್ರವೇ ಗುರುತಿಸಲು ಸಾಧ್ಯವಾಗುತ್ತದೆ. ಸಾಕಷ್ಟು ಮುಚ್ಚಿ ಹೋದ ಪ್ರಕರಣಗಳನ್ನು ಫೋರೆನ್ಸಿಕ್ ವರದಿಯ ಆಧಾರದಲ್ಲಿ ಭೇದಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದರು.

ಮೆಡಿಕೋ ಲೀಗಲ್ ವ್ಯವಸ್ಥೆಯಲ್ಲಿ ತುಂಬಾ ಸವಾಲುಗಳಿವೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಗಳು ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಪೊಲೀಸರು ಕಾಪಾಡಬೇಕಾಗುತ್ತದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಯಾವುದೇ ಹಿಂಸೆ ನೀಡದೆ ತುರ್ತು ವೈದ್ಯಕೀಯ ನೆರವು ನೀಡುವ ಮಹತ್ತರ ಜವಾಬ್ದಾರಿ ವೈದ್ಯರ ಮೇಲಿದೆ ಎಂದು ಅವರು ಹೇಳಿದರು.

2018ರ ಫೆಬ್ರವರಿಯಲ್ಲಿ ತರಲಾದ ಕ್ರಿಮಿನಲ್ ಅಪರಾಧ ಕಾಯಿದೆಯಲ್ಲಿನ ತಿದ್ದುಪಡಿಯ ಪ್ರಕಾರ ಪೋಕ್ಸೊ ಹಾಗೂ ಅತ್ಯಾಚಾರ ಸೇರಿದಂತೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಬೇಕು. ಅಲ್ಲದೆ ತ್ವರಿತ ನ್ಯಾಯ ದೊರೆಯಬೇಕು. ಆದುದರಿಂದ ಇಂತಹ ಸಂದರ್ಭದಲ್ಲಿ ಫೋರೆನ್ಸಿಕ್ ಹಾಗೂ ಪೊಲೀಸರ ಮಧ್ಯೆ ಸಮನ್ವಯತೆ ಮುಖ್ಯವಾಗುತ್ತದೆ ಎಂದರು.

ಸುರಕ್ಷತಾ ವಾತಾವರಣ ಇರುವ ದೇಶಗಳಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ. ವೈದ್ಯಕೀಯ ಮತ್ತು ಪೊಲೀಸರ ಪರಸ್ಪರ ಸಹಕಾರ ದಿಂದ ಉತ್ತಮ ಸಮಾಜವನ್ನು ನಿರ್ಮಿಸಬಹುದಾಗಿದೆ. ಯಾವುದೇ ಒಂದು ಅಪರಾಧ ಪ್ರಕರಣದ ತನಿಖೆ ನಡೆಸುವ ಜವಾಬ್ದಾರಿ ಪೊಲೀಸರ ಮೇಲಿದ್ದರೆ ಅದಕ್ಕೆ ಸಂಬಂಧಿಸಿ ವೈಜ್ಞಾನಿಕ ಸಾಕ್ಷ ಒದಗಿಸುವುದು ವೈದ್ಯಕೀಯ ಕ್ಷೇತ್ರದ ಜವಾಬಾ್ದರಿಯಾಗಿದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರಗಿ ಮಾತನಾಡಿ, ವೈಜ್ಞಾನಿಕ ವಿಶ್ಲೇಷಣೆಯಿಂದ ಅಪರಾಧ ಪ್ರಕರಣಗಳನ್ನು ಬೇಧಿಸಲು ಸಾಧ್ಯ. ಈ ಮೂಲಕ ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬಹು ದಾಗಿದೆ. ಸಾರ್ವಜನಿಕರಿಗೆ ಸ್ವಚ್ಛ ಮತ್ತು ಸುರಕ್ಷ ಸಮಾಜ ಒದಗಿಸುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಮಾಹೆಯ ಸಹಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿ ದ್ದರು. ಮಾಹೆಯ ಉಪಸಹಕುಲಪತಿ ಡಾ.ಪೂರ್ಣಿಮಾ ಬಾಳಿಗಾ, ಕೆಎಂಸಿಯ ಪ್ರಾಂಶುಪಾಲೆ ಡಾ.ಪ್ರಜ್ಞಾ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಉದ್ಯಮಿ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಜೀವಮಾನದ ಸಾಧನೆಗಾಗಿ ಮೈಸೂರು ವೈದ್ಯಕೀಯ ಕಾಲೇಜಿನ ಡಾ.ಚಂದ್ರಶೇಖರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಫೋರೆನ್ಸಿಕ್ ಮೆಡಿಸಿನ್‌ಗೆ ಸಂಬಂಧಿಸಿದ ಪುಸ್ತಕವನ್ನು ಬಿಡುಗಡೆಗೊಳಿಸ ಲಾಯಿತು. ನ್ಯಾಯ ವೈದ್ಯಶಾಸ್ತ್ರ್ತ ವಿಭಾಗದ ಮುಖ್ಯಸ್ಥ ಡಾ. ವಿನೋದ್ ಸಿ. ನಾಯಕ್ ಸ್ವಾಗತಿಸಿದರು. ಧಾರಿಣಿ ಪ್ರಸಾದ್ ಕಾರ್ಯಕ್ರಮ ನಿೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News