ಮಿಝೋರಾಂನ ಮುಖ್ಯ ಚುನಾವಣಾಧಿಕಾರಿ ರಾಜೀನಾಮೆಗೆ ಆಗ್ರಹ

Update: 2018-11-04 14:11 GMT

 ಹೊಸದಿಲ್ಲಿ, ನ.4: ಮಿಝೋರಾಂನ ಮುಖ್ಯ ಚುನಾವಣಾಧಿಕಾರಿ ಎಸ್.ಬಿ.ಶಶಾಂಕ್ ರಾಜ್ಯದಲ್ಲಿ ಮುಕ್ತ, ನ್ಯಾಯಸಮ್ಮತ ಮತ್ತು ಶಾಂತ ರೀತಿಯ ಮತದಾನ ನಡೆಯುವುದಕ್ಕೆ ಅಡ್ಡಿಯಾಗಿದ್ದಾರೆ ಎಂದು ಆರೋಪಿಸಿರುವ ಸಮನ್ವಯ ಸಮಿತಿ, ತಕ್ಷಣ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.

ಶಶಾಂಕ್ ಅವರು ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಸಮಿತಿ, ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವ ಚುನಾವಣಾಧಿಕಾರಿಯ ಅಗತ್ಯವಿದೆ ಎಂದು ಹೇಳಿದೆ. ಮಿಝೋರಾಂನ ಸರಕಾರ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಲಾಲ್ನುನ್‌ಮವಿಯ ಚವುಂಗೊ ಚುನಾವಣಾ ಪ್ರಕ್ರಿಯೆಯಲ್ಲಿ ನೇರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಶಶಾಂಕ್ , ಚವುಂಗೋರನ್ನು ಹುದ್ದೆಯಿಂದ ತೆರವುಗೊಳಿಸುವಂತೆ ಸರಕಾರಕ್ಕೆ ಸೂಚಿಸಿದ್ದರು. ಮಿರೆರಾಂನ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಜತೆಗೂಡಿ ಸ್ಥಾಪಿಸಿರುವ ಸಮನ್ವಯ ಸಮಿತಿಯು ಚುನಾವಣಾಧಿಕಾರಿಯ ಆದೇಶವನ್ನು ವಿರೋಧಿಸಿದ್ದು , ಎಲ್ಲಾ ‘ಮಿರೆ’ಗಳೂ ಚುನಾವಣಾಧಿಕಾರಿಯ ರಾಜೀನಾಮೆಗೆ ಒತ್ತಡ ಹೇರುವಂತೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News