ಯಮನ್: ಹುದೈದಾ ನಗರದಲ್ಲಿ ತೀವ್ರಗೊಂಡ ಸಂಘರ್ಷ

Update: 2018-11-04 16:13 GMT

ಹುದೈದಾ (ಯಮನ್), ನ. 4: ಯಮನ್‌ನ ಬಂದರು ನಗರ ಹುದೈದಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಡಝನ್‌ಗಟ್ಟಲೆ ಯಮನ್ ಬಂಡುಕೋರರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಅದೇ ವೇಳೆ, ಸರಕಾರ ಪರ ಪಡೆಗಳು ಬಂಡುಕೋರ ನಿಯಂತ್ರಣದಲ್ಲಿರುವ ಕೆಂಪು ಸಮುದ್ರ ಬಂದರು ನಗರದ ಒಳಭಾಗದತ್ತ ಚಲಿಸುತ್ತಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 53 ಹೌದಿ ಬಂಡುಕೋರರು ಮೃತಪಟ್ಟಿದ್ದಾರೆ ಹಾಗೂ ಡಝನ್‌ಗಟ್ಟಳೆ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಹುದೈದಾ ನಗರದಲ್ಲಿ ಸಂಘರ್ಷ ತೀವ್ರಗೊಂಡಿದೆ ಹಾಗೂ ಶನಿವಾರ ಸಂಜೆ ಮತ್ತು ರವಿವಾರ ಬೆಳಗ್ಗೆ ನಗರದ ವಿಶ್ವವಿದ್ಯಾನಿಲಯದ ಸುತ್ತಮುತ್ತ ಗುಂಡಿನ ಕಾಳಗ ನಡೆಯುತ್ತಿದೆ ಎಂದು ಯಮನ್ ಸೇನಾ ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News