ಪಾಕ್ ಜೊತೆ ಗಡಿ ರಸ್ತೆಗಳು ಮತ್ತು ಬೇಲಿಗಳ ಫೊಟೊ ಹಂಚಿದ ಯೋಧನ ಬಂಧನ

Update: 2018-11-04 17:25 GMT

ಫೆರೊಝೆಪುರ್,ನ.4: ಭಾರತದ ಗಡಿಯಲ್ಲಿರುವ ರಸ್ತೆಗಳು ಮತ್ತು ಬೇಲಿಗಳ ಕುರಿತ ರಹಸ್ಯ ಮಾಹಿತಿಗಳ ಜೊತೆಗೆ ಫೊಟೊಗಳನ್ನು ಪಾಕಿಸ್ತಾನದ ಏಜೆಂಟ್ ಜೊತೆ ಹಂಚಿಕೊಂಡ ಬಿಎಸ್‌ಎಫ್ ಯೋಧನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಿಎಸ್‌ಎಫ್ ಯೋಧ ಶೇಕ್ ರೈಝುದ್ದೀನ್ ಬಂಧಿತ ಆರೋಪಿಯಾಗಿದ್ದಾರನೆ. ಇವನ ಮೇಲೆ ಗಡಿ ರಕ್ಷಣಾ ಪಡೆ ಕಳೆದ ಕೆಲವು ತಿಂಗಳುಗಳಿಂದ ನಿಗಾಯಿಟ್ಟಿತ್ತು. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ರೆನ್ಪುರ ಗ್ರಾಮದ ನಿವಾಸಿಯಾಗಿರುವ ರೈಝುದ್ದೀನ್‌ನನ್ನು ಪಂಜಾಬ್‌ನ ಫೆರೊಝೆಪುರ್‌ನಲ್ಲಿ ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿತ್ತು. ಆರೋಪಿಯಿಂದ ಎರಡು ಮೊಬೈಲ್ ಫೋನ್‌ಗಳು ಮತ್ತು ಏಳು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿಯಲ್ಲಿರುವ ರಸ್ತೆಗಳು, ಬೇಲಿಗಳು, ಬಿಎಸ್‌ಎಫ್‌ನ ಉನ್ನತಾಧಿಕಾರಿಗಳ ಸಂಪರ್ಕ ಸಂಖ್ಯೆಗಳು ಮತ್ತು ಇತರ ರಹಸ್ಯ ಮಾಹಿತಿಗಳನ್ನು ರೈಝುದ್ದೀನ್ ಪಾಕಿಸ್ತಾನದ ಐಎಸ್‌ಐ ಏಜೆಂಟ್ ಮಿರ್ಝಾ ಫೈಝಲ್ ಜೊತೆ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News