ಗುಜರಾತ್‌ನ 25 ಮಹಿಳಾ ಗೃಹ ರಕ್ಷಕರಿಂದ ಲೈಂಗಿಕ ಕಿರುಕುಳ ಆರೋಪ

Update: 2018-11-04 17:17 GMT

ಸೂರತ್,ನ.4: ಗುಜರಾತ್‌ನಲ್ಲಿ ಕನಿಷ್ಟ 25 ಮಹಿಳಾ ಗೃಹ ರಕ್ಷಕ ಸಿಬ್ಬಂದಿ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ಹೊರಿಸಿದ್ದಾರೆ. ಸಂತ್ರಸ್ತ ಮಹಿಳೆಯರು ನಗರದ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ಅವರಿಗೆ ಈ ಕುರಿತು ಲಿಖಿತ ದೂರನ್ನು ನೀಡಿದ್ದು ತನಿಖೆಗೆ ಆಗ್ರಹಿಸಿದ್ದಾರೆ.

ಉದ್ಯೋಗಸ್ಥಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆಯಡಿ ರಚಿಸಲಾಗಿರುವ ಸ್ಥಳೀಯ ದೂರುಗಳ ಸಮಿತಿಯು ಈ ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಶರ್ಮಾ ತಿಳಿಸಿದ್ದಾರೆ. ದೂರಿನಲ್ಲಿ ಇಬ್ಬರು ಹಿರಿಯ ಗೃಹ ರಕ್ಷಕ ಅಧಿಕಾರಿಗಳು ಮಹಿಳೆಯರನ್ನು ಮಾನಸಿಕ, ದೈಹಿಕ, ಲೈಂಗಿಕವಾಗಿ ಪೀಡಿಸಿದ್ದಾರೆ ಮತ್ತು ಆರ್ಥಿಕ ಕಿರುಕುಳವನ್ನೂ ನೀಡಿದ್ದಾರೆ. ಜೊತೆಗೆ ಕೆಲವರಿಂದ ಲೈಂಗಿಕ ಸುಖದ ಬೇಡಿಕೆಯನ್ನೂ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯರು ತಮ್ಮಿಷ್ಟದ ಜಾಗಕ್ಕೆ ವರ್ಗಾವಣೆಗೊಳ್ಳಲು ಆರೋಪಿತ ಅಧಿಕಾರಿಗಳು ಹಣದ ಬೇಡಿಕೆಯಿಡುತ್ತಿದ್ದರು. ಹಣ ನೀಡದಿದ್ದರೆ ದೂರದ ಊರುಗಳಿಗೆ ವರ್ಗಾವಣೆ ಮಾಡಿ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News