ಭಾರತದ ಇಂಜಿನಿಯರ್ ಅಮೆರಿಕದ ಕ್ರಿಕೆಟ್ ತಂಡದ ನಾಯಕ !
ಹೊಸದಿಲ್ಲಿ, ನ. 4: ಅಮೆರಿಕದ ಕಾರ್ನೆಲ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುವ ಸಲುವಾಗಿ ಕ್ರಿಕೆಟ್ ತೊರೆದಿದ್ದ ಮುಂಬೈನ 27ರ ಹರೆಯದ ವೇಗದ ಬೌಲರ್ ಸೌರಭ್ ನೇತ್ರಾವಳ್ಕರ್ ಇದೀಗ ಅಮೆರಿಕದ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಆರಡಿ ಎತ್ತರದ ಎಡಗೈ ಮಧ್ಯಮ ವೇಗದ ಬೌಲರ್ ಸೌರಭ್ 2010ರಲ್ಲಿ ನಡೆದ 19ರ ವಯೋಮಿತಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾಗಿದ್ದರು.
ಇಂಗ್ಲೆಂಡ್‌ನ ಭವಿಷ್ಯದ ಕ್ಯಾಪ್ಟನ್ ಜೋ ರೂಟ್ ಮತ್ತು ಪಾಕಿಸ್ತಾನದ ಸ್ಫೋಟಕ ಆರಂಭಗಾರ ಅಹ್ಮದ್ ಶೆಹಝಾದ್ ಅವರ ವಿಕೆಟ್ ಕೂಡಾ ಪಡೆದಿದ್ದರು. ಮೂರು ವರ್ಷಗಳ ಬಳಿಕ ಸೌರಭ್ ಅವರು ಮುಂಬೈ ತಂಡದ ಪರ ಒಂದು ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ಕರ್ನಾಟಕದ ವಿರುದ್ಧ ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿದ್ದರು. ಆದರೆ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಸೌರಭ್ ಅವರಿಗೆ ತೃಪ್ತಿ ಇರಲಿಲ್ಲ. ಎರಡು ವರ್ಷ ಕಾಲ ಪೂರ್ಣಾವಧಿ ಸಮಯವನ್ನು ಇದಕ್ಕಾಗಿ ವಿನಿಯೋಗಿಸಿದರೂ ಮುಂದಿನ ಹಂತ ತಲುಪಲು ಸಾಧ್ಯವಾಗದಿರುವ ವಿಚಾರದಲ್ಲಿ ಅವರಿಗೆ ಬೇಸರ ಇತ್ತು.
ಮುಂಬೈನ ಸರ್ದಾರ್ ಪಟೇಲ್ ಇನ್‌ಸ್ಟ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ವಿಜ್ಞಾನ ಪದವಿ ಪಡೆದಿರುವ ಅವರು, ಸ್ನಾತಕೋತ್ತರ ಪದವಿಗಾಗಿ ಕಾರ್ನೆಲ್ ವಿವಿಗೆ ತೆರಳಿದ್ದರು. ಕ್ಯಾಂಪಸ್ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಇನಿಂಗ್ಸ್ ಆರಂಭಿಸಿದ್ದರು.
ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಒರ್ಯಾಕಲ್ ಕಂಪೆನಿ ಸೇರಿದ ಬಳಿಕವೂ ನೇತ್ರವಾಳ್ಕರ್ ಅವರ ಕ್ರಿಕೆಟ್ ಪ್ರೀತಿ ಮುಂದುವರಿದಿತ್ತು. ವಾರಾಂತ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಿಂದ ಲಾಸ್ ಏಂಜಲೀಸ್‌ಗೆ ತೆರಳಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ಶನಿವಾರ 50 ಓವರ್‌ಗಳ ಪಂದ್ಯವನ್ನು ಅಲ್ಲಿ ಆಡಿ ಮತ್ತು ರಾತ್ರಿ ಸ್ಯಾನ್‌ಫ್ರಾನ್ಸಿಸ್ಕೊಗೆ ಮರಳಿ ರವಿವಾರ 50 ಓವರ್‌ಗಳ ಪಂದ್ಯ ಆಡುತ್ತಿದ್ದುದಾಗಿ ಅವರು ವಿವರಿಸಿದ್ದಾರೆ. ಆಯ್ಕೆದಾರರು ನನ್ನ ಪ್ರಯತ್ನವನ್ನು ಗುರುತಿಸಿ ಕಳೆದ ಜನವರಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದ್ದರು.
ಅಮೆರಿಕದಲ್ಲಿ ಕ್ರಿಕೆಟ್ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಸುಮಾರು 3.6 ಕೋಟಿ ಕ್ರಿಕೆಟ್ ಪ್ರೇಮಿಗಳಿದ್ದಾರೆ. 48 ರಾಜ್ಯಗಳಲ್ಲಿ 400ಕ್ಕೂ ಹೆಚ್ಚು ಲೀಗ್ ನಡೆಯುತ್ತಿದ್ದು, 6,000 ತಂಡಗಳಲ್ಲಿ ಸುಮಾರು ಎರಡು ಲಕ್ಷ ಮಂದಿ ಅಭ್ಯಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ವೆಸ್ಟ್‌ಇಂಡೀಸ್, ಭಾರತ ಹಾಗೂ ಪಾಕಿಸ್ತಾನ ಮೂಲದ ಕ್ರಿಕೆಟಿಗರಿದ್ದಾರೆ. ಹಿಂದೆ ಮಹಾರಾಷ್ಟ್ರದ ಸುಶೀಲ್ ನಾಡಕರ್ಣಿ ಹಾಗೂ ಹೈದರಾಬಾದ್‌ನ ಇಬ್ರಾಹೀಂ ಖಲೀಲ್ ಕೂಡಾ ಅಮೆರಿಕ ತಂಡದ ನಾಯಕರಾಗಿದ್ದರು.
ಅಮೆರಿಕ ತಂಡ 2023ರಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯುವ ಯತ್ನ ನಡೆಸಲಿದೆ. ಮುಂದಿನ ವಾರ ಅಮೆರಿಕ ತಂಡ ಐಸಿಸಿ ವಿಶ್ವಕಪ್ ಕ್ರಿಕೆಟ್ ಲೀಗ್ ಡಿವಿಷನ್ ಲೀಗ್ 3ರಲ್ಲಿ ಭಾಗವಹಿಸಲು ಒಮನ್‌ಗೆ ತೆರಳಲಿದೆ. ಇದು ಐಸಿಸಿ ವಿಶ್ವಕಪ್‌ಗೆ ಅರ್ಹತಾ ಟೂರ್ನಿಯಾಗಿದೆ.
ಸೌರಭ್ ನೇತಾ್ರವಳ್ಕರ್ ಬಗೆ್ಗಒಂದಿಷು್ಟ
ಎಡಗೈ ಮಧ್ಯಮ ವೇಗಿ ಸೌರಭ್ ನೇತ್ರಾವಳ್ಕರ್2008-09ನೇ ಸಾಲಿನಲ್ಲಿ ಕೋಚ್ ಬೆಹಾರ್ ಟ್ರೋಫಿಯ 6 ಪಂದ್ಯಗಳಲ್ಲಿ 30 ವಿಕೆಟ್ ಪಡೆದಿದ್ದರು.
ದಕ್ಷಿಣ ಆಫ್ರಿಕದಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಸೌರಭ್ ಗರಿಷ್ಠ ವಿಕೆಟ್(8 ವಿಕೆಟ್) ಪಡೆದಿದ್ದರು.
ಆಡಿರುವ 1 ಪ್ರಥಮ ದರ್ಜೆ ಪಂದ್ಯದಲ್ಲಿ 77ಕ್ಕೆ 3 ವಿಕೆಟ್ ಪಡೆದಿದ್ದರು. 3 ರನ್ ಗಳಿಸಿದ್ದರು.
ಲೀಸ್ಟ್ ‘ಎ’ 21 ಪಂದ್ಯಗಳಲ್ಲಿ 31 ವಿಕೆಟ್ ಮತ್ತು 40 ರನ್ ಗಳಿಸಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಇಬ್ರಾಹೀಂ ಖಲೀಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಸೌರಭ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಡಲಾಗಿತ್ತು.
36ರ ಹರೆಯದ ಇಬ್ರಾಹೀಂ ಖಲೀಲ್ ಹೈದರಾಬಾದ್‌ನವರು ಎನ್ನುವುದು ವಿಶೇಷ.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಖಲೀಲ್ 57 ಪ್ರಥಮ ದರ್ಜೆ ಪಂದ್ಯಗಳಲ್ಲಿ 3 ಶತಕಗಳನ್ನು ಒಳಗೊಂಡ 2,158 ರನ್ ದಾಖಲಿಸಿದ್ದಾರೆ.