ಡ್ಯಾನ್ಸರ್‌ಗಳಾದ ಭಾರತದ ಕ್ರಿಕೆಟ್ ಆಟಗಾರ್ತಿಯರು
ಹೊಸದಿಲ್ಲಿ, ನ.4: ಭಾರತದ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ವೆಸ್ಟ್‌ಇಂಡೀಸ್‌ನಲ್ಲಿ ನವೆಂಬರ್ 9ರಿಂದ 24ರ ತನಕ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡಲು ವೆಸ್ಟ್‌ಇಂಡೀಸ್ ತಲುಪಿದ್ದಾರೆ. ತಂಡದ ಕೆಲವು ಆಟಗಾರ್ತಿಯರು ನೃತ್ಯ ಗಾರ್ತಿಯರಾಗಿ ಗಮನ ಸೆಳೆದಿದ್ದಾರೆ.
ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಸ್ಮತಿ ಮಂಧಾನ, ವೇದಾ ಕೃಷ್ಣಮೂರ್ತಿ ಮತ್ತು ಯುವ ಆಟಗಾರ್ತಿ ಜಮೀಮಾ ರೋಡ್ರಿಗಸ್ ಅವರು ಟೂರ್ನಮೆಂಟ್ ಮುನ್ನ ಡ್ಯಾನ್ಸರ್‌ಗಳಾಗಿ ತಮ್ಮಲ್ಲಿನ ಪ್ರತಿಭೆಯನ್ನು ವೆಸ್ಟ್ ಇಂಡೀಸ್‌ನಲ್ಲಿ ಪ್ರದರ್ಶಿಸಿದ್ದಾರೆ. ಐಸಿಸಿ ವರ್ಲ್ಡ್ ಟ್ವೆಂಟಿ-20ನ ಟ್ವಿಟರ್‌ನಲ್ಲಿ ಇವರು ನೃತ್ಯ ಮಾಡುತ್ತಿರುವ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ.
ಭಾರತದ ಮಹಿಳಾ ಕ್ರಿಕೆಟ್ ತಂಡ ನ.9ರಂದು ಮೊದಲ ಪಂದ್ಯದಲ್ಲಿ ಗಯಾನದಲ್ಲಿ ನ್ಯೂಝಿಲೆಂಡ್‌ನ್ನುಎದುರಿಸಲಿದೆ.
ಗ್ರೂಪ್ ‘ಬಿ’ಯಲ್ಲಿ ಆಸ್ಟ್ರೇಲಿಯ , ನ್ಯೂಝಿಲೆಂಡ್, ಪಾಕಿಸ್ತಾನ, ಐರ್ಲೆಂಡ್ ತಂಡದೊಂದಿಗೆ ಭಾರತ ಸ್ಥಾನ ಪಡೆದಿದೆ. 10 ತಂಡಗಳು ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯಗಳಲ್ಲಿ ಹಣಾಹಣಿ ನಡೆಸಲಿದೆ.
ಸ್ಫೋಟಕ ಆರಂಭಿಕ ಬ್ಯಾಟ್ಸ್‌ವುಮೆನ್ ಮಂಧಾನ ಮತ್ತು ರೋಡ್ರಿಗಸ್ ಅವರು ಭಾರತ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮತಿಮಂಧಾನ (ಉಪನಾಯಕಿ), ಮಿಥಾಲಿ ರಾಜ್, ಜೆಮಿಮಾ ರೋಡ್ರಿಗಸ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಪೂನಮ್ ಯಾದವ್, ರಾಧಾ ಯಾದವ್, ಅನುಜಾ ಪಾಟೀಲ್, ಏಕ್ತಾ ಬಿಸ್ಟ್, ಡಿ. ಹೇಮಲತಾ, ಮನ್ಸಿ ಜೋಶಿ, ಪೂಜಾ ವಸ್ತ್ರಾಕರ್ ಮತ್ತು ಆರುಂಧತಿ ರೆಡ್ಡಿ.