ಮಿಝೊರಾಂ ಸ್ಪೀಕರ್ ರಾಜೀನಾಮೆ; ಬಿಜೆಪಿಗೆ ಸೇರ್ಪಡೆ

Update: 2018-11-05 15:18 GMT

ಐಝ್‌ವಾಲ್, ನ.5: ಮಿಝೊರಾಂನ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಸಭೆಯ ಸ್ಪೀಕರ್ ಹಿಫೇಯಿ ಸ್ಪೀಕರ್ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವ ಅವರು ಬಿಜೆಪಿಗೆ ಸೇರ್ಪಡೆಗೊಂಡಿರುವುದಾಗಿ ವರದಿ ತಿಳಿಸಿದೆ.

ಏಳು ಬಾರಿ ವಿಧಾನಸಭೆ ಶಾಸಕನಾಗಿ ಕಾರ್ಯನಿರ್ವಹಿಸಿರುವ 81 ವರ್ಷದ ಹಿಫೇಯಿ ಉಪಸ್ಪೀಕರ್ ಆರ್.ಲಾಲ್ರಿನವ್ಮರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು ಅದನ್ನು ಸ್ವೀಕರಿಸಲಾಗಿದೆ. ಕಾಂಗ್ರೆಸ್ ಆಡಳಿತವಿರುವ ಏಕೈಕ ಈಶಾನ್ಯ ರಾಜ್ಯವಾಗಿರುವ ಮಣಿಪುರದಲ್ಲಿ ಈ ತಿಂಗಳಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಕಳೆದ ಸೆಪ್ಟೆಂಬರ್‌ನಿಂದ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಶಾಸಕರ ಸಂಖ್ಯೆ ಐದಕ್ಕೇರಿದೆ. ಹಿಫೇಯಿ ಬಿಜೆಪಿ ಸೇರ್ಪಡೆಯನ್ನು ಸ್ವಾಗತಿಸಿರುವ ಎನ್‌ಡಿಎ ಸಂಚಾಲಕ ಹಾಗೂ ಬಿಜೆಪಿ ಮುಖಂಡ ಹಿಮಂತ ಬಿಸ್ವ ಶರ್ಮ, ಅವರ ಸೇರ್ಪಡೆಯಿಂದ ಮಣಿಪುರದಲ್ಲಿ ಬಿಜೆಪಿಯ ಬಲವರ್ಧನೆಯಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News